ಉಡುಪಿ: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ಉಡುಪಿಯಲ್ಲಿ ಇಂದು ದಿಢೀರ್ ಮಳೆಯಾಯಿತು. ಕಳೆದೆರಡು ದಿನಗಳಿಂದ ರಾತ್ರಿ ವೇಳೆ ಮಳೆಯಾಗುತ್ತಿತ್ತು. ಆದರೆ, ಹಗಲು ಹೊತ್ತು ಮಳೆ ಇರಲಿಲ್ಲ.
ಎರಡು ದಿನ ಮಳೆಯಾಗಲಿದೆ ಎಂಬ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿತ್ತು. ಅದರಂತೆ ಜಿಲ್ಲೆಯ ಹಲವೆಡೆ ದಿಢೀರ್ ಮಳೆಯಾಗಿದೆ.
ಸಾಮಾನ್ಯವಾಗಿ ಅಕ್ಟೋಬರ್ ಮೂರನೇ ವಾರಕ್ಕೆ ಮಳೆಯಾಗುವುದು ಕಡಿಮೆ. ಆದರೆ, ಈ ವರ್ಷ ಮಳೆಗಾಲವೇ ಮುಗಿಯುತ್ತಿಲ್ಲ ಎಂದು ಜನ ಮಾತನಾಡಿಕೊಳ್ಳುವಂತಾಗಿದೆ.
Kshetra Samachara
18/10/2021 01:18 pm