ಮಂಗಳೂರು: ನಗರದ ಮರೋಳಿ ವಿಜಯನಗರದ ಬಳಿ ಕಾಣಿಸಿಕೊಂಡಿದ್ದ ಚಿರತೆ ಸ್ಥಳೀಯರ ಆತಂಕಕ್ಕೆ ಕಾರಣವಾಗಿತ್ತು. ಆದ್ರೆ ಅದೇ ಚಿರತೆ ಈಗ ಮತ್ತದೇ ಭಾಗದಲ್ಲಿ ಕಾಣಿಸಿಕೊಂಡಿದೆ. ಹೀಗಾಗಿ ಜನ ಆತಂಕದಲ್ಲಿದ್ದಾರೆ. ರೆಡ್ ಬಿಲ್ಡಿಂಗ್ ಸಮೀಪ ಚಿರತೆ ಬುಧವಾರ ಸುಮಾರು 2.30ಕ್ಕೆ ಕಾಣಿಸಿಕೊಂಡಿದೆ.
ಅಲ್ಲಿನ ನಿವಾಸಿಗಳು ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಅರಣ್ಯ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ್ದು ಚಿರತೆ ಹೆಜ್ಜೆ ಗುರುತು ಪತ್ತೆಯಾಗಿದೆ. ಕೆಲವು ಸಮಯದವರೆಗೆ ಕಾರ್ಯಾಚರಣೆ ನಡೆಸಿದರೂ ಚಿರತೆ ಪತ್ತೆಯಾಗಿಲ್ಲ. ಹೀಗಾಗಿ ಚಿರತೆ ಕಾಣಿಸಿಕೊಂಡ ಪ್ರದೇಶದ ಬಳಿ ಬೋನು ಇಡಲಾಗಿದೆ.
Kshetra Samachara
07/10/2021 06:39 pm