ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಲ್ಪೆ ಕಡಲಲ್ಲಿ ಕಾಣಿಸಿಕೊಂಡಿತು "ಹೆಲಿಕಾಫ್ಟರ್" ಫಿಶ್ !

ಮಲ್ಪೆ: ಉಡುಪಿಯ ಮಲ್ಪೆ ಸರ್ವಋತು ಮೀನುಗಾರಿಕಾ ಬಂದರಿನಲ್ಲಿ ಅಪರೂಪದ ಮೀನೊಂದು ಕಾಣಿಸಿಕೊಂಡು ಮತ್ಸ್ಯಪ್ರಿಯರ ಕುತೂಹಲ ಕೆರಳಿಸಿದೆ. ಭಾರೀ ಗಾತ್ರ.. ಉದ್ದ ಬಾಲ.. ಅಕ್ಕಪಕ್ಕ ಬೆನ್ನ ಮೇಲೆ ಅಗಲಗಲ ರೆಕ್ಕೆಯಿರುವ ಮೀನು ಎಲ್ಲರಲ್ಲೂ ಆಶ್ಚರ್ಯ ಹುಟ್ಟಿಸಿದೆ. ಉಡುಪಿಯಿಂದ ಪಶ್ಚಿಮ ಕಡಲ ತೀರದಲ್ಲಿ ಸುಮಾರು 20 ನಾಟೇಕಲ್ ದೂರದಲ್ಲಿ ಲುಕ್ಮಾನ್ ಎಂಬವರಿಗೆ ಸೇರಿದ ಮೀನುಗಾರಿಕಾ ಬೋಟ್ ನಲ್ಲಿ ಬಲೆ ಬೀಸಲಾಗಿತ್ತು. ಬಂಗುಡೆ, ಅಂಜಲ್ ಮೀನಿನ ಜೊತೆಗೆ ಭಾರಿಗಾತ್ರದ ಈ ಮೀನು ಬಿದ್ದಿದೆ.

ಸ್ಥಳೀಯವಾಗಿ ಇದಕ್ಕೆ ನೆಮ್ಮೀನ್ ಎಂಬ ಹೆಸರಿದೆ. ಹೆಲಿಕಾಪ್ಟರ್ ಫಿಶ್ ಅಂತ ಅಡ್ಡ ಹೆಸರಿದೆ. ಭಾರೀ ಗಾತ್ರದ ಮೀನು 84 ಕಿಲೋ ತೂಗುತ್ತಿತ್ತು. ಕರ್ನಾಟಕದ ಮಂದಿಗೆ ಹೆಲಿಕಾಪ್ಟರ್ ಫಿಶ್ ನ ಮಾಂಸ ಇಷ್ಟ ಇಲ್ಲ. ಇಲ್ಲಿನವರಿಗೆ ಅದರ ರುಚಿ ಹಿಡಿಸುವುದಿಲ್ಲ. ಕೇರಳಿಗರು ಕೆಜಿಗೆ ಐವತ್ತು ರೂಪಾಯಿ ಕೊಟ್ಟು ನೆಮ್ಮೀನ್ ನ ಮಾಂಸವನ್ನು ಖರೀದಿ ಮಾಡುತ್ತಾರೆ. ಹೀಗಾಗಿ ಮಲ್ಪೆಯಿಂದ ಮಂಗಳೂರು ಮೂಲಕ ಕೇರಳಕ್ಕೆ ನೆಮ್ಮೀನನ್ನು ರವಾನೆ ಮಾಡಲಾಯಿತು.

Edited By : Nagesh Gaonkar
Kshetra Samachara

Kshetra Samachara

04/10/2021 04:50 pm

Cinque Terre

8.6 K

Cinque Terre

0

ಸಂಬಂಧಿತ ಸುದ್ದಿ