ಕಾಪು: ಕರಾವಳಿಯ ಆಕರ್ಷಕ ಪ್ರವಾಸಿ ತಾಣಗಳಲ್ಲೊಂದಾದ ಕಾಪು ಲೈಟ್ ಹೌಸ್ ಮತ್ತು ಬೀಚ್ ಇದೀಗ ಪ್ರವಾಸಿಗರಿಗೆ ಸಂಪೂರ್ಣ ಮುಕ್ತವಾಗಿ ತೆರೆದುಕೊಂಡಿದ್ದು, ಪ್ರವಾಸಿಗರು, ಮಕ್ಕಳು ಮತ್ತು ವಿಹಾರಾರ್ಥಿಗಳ ಕಲರವ ಮತ್ತೆ ಪ್ರಾರಂಭಗೊಂಡಿದೆ.
ಕೊರೊನಾ ಎರಡನೇ ಅಲೆಯ ಕಾರಣದಿಂದ ಕಳೆದ ಮಾರ್ಚ್ ತಿಂಗಳಿನಿಂದ ಕಾಪು ಬೀಚ್‌ಗೆ ಸಾರ್ವಜನಿಕರು ಮತ್ತು ಪ್ರವಾಸಿಗರ ಪ್ರವೇಶಕ್ಕೆ ಅಧಿಕೃತವಾಗಿ ನಿರ್ಬಂಧಿಸಲಾಗಿತ್ತು.ಇದರಿಂದಾಗಿ ಬೀಚ್ ಪ್ರವಾಸೋದ್ಯಮ ಸಂಪೂರ್ಣವಾಗಿ ನಿಂತು ಹೋಗಿತ್ತು ಬೀಚ್‌ನಲ್ಲಿ ವ್ಯಾಪಾರ ವಹಿವಾಟುಗಳು ಕೂಡ ಸಂಪೂರ್ಣ ಸ್ಥಗಿತಗೊಂಡಿದ್ದವು.
ರಾಜ್ಯಾದ್ಯಂತ ಕೊರೊನಾ ನಿಯಮಾಳಿಗಳು ಕೂಡ ಒಂದೊಂದಾಗಿ ತೆರವಾಗಿದ್ದು ಕಾಪು ಬೀಚ್‌ನಲ್ಲಿ ನಿಂತುಹೋಗಿದ್ದ ಬಹುತೇಕ ಚಟುವಟಿಕೆಗಳು ಮತ್ತೆ ಪ್ರಾರಂಭಗೊಂಡಿದೆ.ಇದರಿಂದಾಗಿ ಕಳೆದ ಒಂದು ವಾರದಿಂದ ಬೀಚ್ಗೆ ಆಗಮಿಸುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ಶನಿವಾರ ಮತ್ತು ಭಾನುವಾರ ಸಂಜೆ ಬಿಚ್‌ನಲ್ಲಿ ಹೆಚ್ಚಿನ ಜನಸಂದಣಿ ಕಂಡುಬಂತು.
Kshetra Samachara
27/09/2021 03:50 pm