ಉಡುಪಿ: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಹಿನ್ನೆಲೆಯಲ್ಲಿ ಉಡುಪಿಯಲ್ಲಿ ದಿಢೀರ್ ಮಳೆಯಾಗಿದೆ. ಹವಾಮಾನ ಇಲಾಖೆ ಮುಂದಿನ ಮೂರ್ನಾಲ್ಕು ದಿನ ಜಿಲ್ಲೆಯಾದ್ಯಂತ ಸಾಧಾರಣ ಮಳೆ ಬೀಳಲಿದೆ ಎಂಬ ಮುನ್ಸೂಚನೆ ನೀಡಿತ್ತು. ಮುಂಜಾನೆ ಕೆಲ ಕಾಲ ಮಳೆ ಸುರಿದಿದ್ದು ನಂತರ ಬಿಸಿಲಿನ ವಾತಾವರಣ ಇತ್ತು.
ಇದೀಗ ಸಂಜೆಯಾಗುತ್ತಿದ್ದಂತೆ ಧಾರಾಕಾರ ಮಳೆಯಾಗಿದೆ. ಮೋಡ ಮುಸುಕಿದ ವಾತಾವರಣ ಇದ್ದು ಮುಂದಿನ ಎರಡು-ಮೂರು ದಿನ ಜಿಲ್ಲೆಯಾದ್ಯಂತ ಮಳೆ ಬೀಳುವ ಸಾಧ್ಯತೆ ಇದೆ. ದಿಢೀರ್ ಮಳೆ ಬಿದ್ದಿದ್ದರಿಂದ ನಗರದಲ್ಲಿ ವಾಹನ ಸವಾರರು ಪರದಾಡಬೇಕಾಯಿತು.
Kshetra Samachara
23/09/2021 08:39 pm