ಮಲ್ಪೆ: ಮುಂಗಾರು ಮಳೆಯ ಅಬ್ಬರ ಕಡಿಮೆಯಾದ ಕೂಡಲೇ ಅರಬ್ಬಿ ಸಮುದ್ರದಲ್ಲಿ ಹವ್ಯಾಸಿ ಮೀನುಗಾರಿಕೆ ಶುರುವಾಗಿದೆ. ಗಾಳ ಹಾಕಿ ಮೀನು ಹಿಡಿಯುವ ಹವ್ಯಾಸ ಹೊಂದಿರುವ ಯುವಕರು ದೋಣಿಗಳ ಜೊತೆ ಅರಬ್ಬಿ ಸಮುದ್ರಕ್ಕೆ ಇಳಿಯುತ್ತಿದ್ದಾರೆ. ಉದ್ಯಾವರ ನಾಗೇಶ್ ಕುಮಾರ್ ಮತ್ತು ಅವರ ಗೆಳೆಯರ ತಂಡ ಅರಬ್ಬಿ ಸಮುದ್ರದಲ್ಲಿ ಗಾಳ ಹಾಕುವ ಸಂದರ್ಭ, ಶಾರ್ಕ್ ಮೀನು ಗಾಳಕ್ಕೆ ಸಿಲುಕಿದೆ. ಇದು ತೀರ ಅಪರೂಪದ ಬೇಟೆ.
ಸಾಮಾನ್ಯವಾಗಿ ಗಾಳಕ್ಕೆ ಸಣ್ಣಪುಟ್ಟ ಮೀನು ಸಿಗುತ್ತದೆ.ಆದರೆ ಚಾಲಾಕಿ ಶಾರ್ಕ್ ಮೀನು ಸಿಕ್ಕಿದ್ದು ,ಮೀನು ಬೇಟೆಗೆ ತೆರಳಿದ ಹವ್ಯಾಸಿ ಮೀನುಗಾರರಲ್ಲಿ ರೋಮಾಂಚನ ಉಂಟು ಮಾಡಿದೆ.ಗಾಳಕ್ಕೆ ಅಚಾನಕ್ಕಾಗಿ ಸಿಕ್ಕ ಶಾರ್ಕ್ ಮೀನು ಕೆಲ ಹೊತ್ತು ಸೆಣೆಸಾಟ ನಡೆಸಿದೆ. ತುಳುವಿನಲ್ಲಿ ತಾಟೆ ಮೀನು ಎಂದು ಶಾರ್ಕನ್ನು ಕರೆಯುತ್ತಾರೆ. ಇದು ಬಹಳ ರುಚಿಕರ. ಮಳೆಗಾಲದಲ್ಲಿ ಈ ಜಾತಿಯ ಮೀನುಗಳು ಸಮುದ್ರತೀರಕ್ಕೆ ಬರುತ್ತವೆಯಂತೆ. ಬೇಸಿಗೆಯಲ್ಲಿ ಆಳ ಸಮುದ್ರದಲ್ಲಿ ಇರುತ್ತದೆ ಎಂದು ಸ್ಥಳೀಯ ಮೀನುಗಾರರು ಹೇಳುತ್ತಾರೆ.
Kshetra Samachara
17/08/2021 04:17 pm