ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುಳ್ಯ : ತೊಂದರೆ ಕೊಡದ ಸಲಗ : ಎಚ್ಚರಿಕೆಯಿಂದಿರಲು ಅರಣ್ಯ ಇಲಾಖೆ ಮನವಿ

ಸುಳ್ಯ : ತಾಲೂಕಿನ ಪೆರಾಜೆ ಬಿಳಿಯಾರು ಪ್ರದೇಶದಲ್ಲಿ ಕಾಡಾನೆಯೊಂದು ಸಂಚಾರ ನಡೆಸಿದ್ದು, ಜನರಲ್ಲಿ ಆತಂಕ ಎದುರಾಗಿದೆ.

ಸಾರ್ವಜನಿಕರ ಮಾಹಿತಿ ಪ್ರಕಾರ ಈ ಆನೆಯು ಪ್ರತೀ ವರ್ಷವು ಕಡಬದ ಸುಬ್ರಹ್ಮಣ್ಯ ವಲಯದಿಂದ ಸುಳ್ಯದ ಪಂಜ ಮೂಲಕ ಮಡಿಕೇರಿಯ ಭಾಗಮಂಡಲ ವರೆಗೂ ಇದೇ ದಾರಿಯಲ್ಲಿ ಸಂಚರಿಸುತ್ತದೆ ಎನ್ನಲಾಗಿದೆ.

ವಿಶೇಷ ಅಂದ್ರೆ ಈ ಆನೆ ಈ ತನಕ ಜನರಿಗೆ ತೊಂದರೆ ನೀಡಿದ ಮಾಹಿತಿ ಇಲ್ಲ.

ಹಾದು ಹೋಗುವ ದಾರಿಯಲ್ಲಿ ಹೊಟ್ಟೆ ಹಸಿವು ಆದಾಗ ಬಾಳೆ,ತೆಂಗು ಸೇರಿದಂತೆ ಬೈನೆ ಮರಗಳನ್ನು ತಿನ್ನುತ್ತಿದೆ ಎನ್ನಲಾಗಿದೆ.ಭಾಗಮಂಡಲ ವರೆಗೂ ಹೋದ ಆನೆ ನಂತರದಲ್ಲಿ ಫೆಬ್ರವರಿ ತಿಂಗಳ ಮಧ್ಯದಲ್ಲಿ ಅದೇ ದಾರಿಯಲ್ಲಿ ವಾಪಾಸು ಬರುತ್ತದೆ ಎನ್ನಲಾಗಿದೆ.

ಆನೆ ಹೋಗುವ ದಾರಿಯಲ್ಲಿ ಸಿಗುವ ಕುಮಾರಧಾರಾ ನದಿ ಹಾಗೂ ಪಯಸ್ವಿನಿ ನದಿಯನ್ನೂ ಆನೆ ಈಜುವ ಮೂಲಕ ನದಿ ದಾಟುತ್ತಿದೆ ಎಂದು ಸಾರ್ವಜನಿಕರು ಹೇಳುತ್ತಾರೆ.

ಈ ಬಗ್ಗೆ ಮಾಧ್ಯಮದ ಜೊತೆಗೆ ಮಾತನಾಡಿದ ಆರ್.ಎಫ್.ಓ ಗಿರೀಶ್ ಅವರು ಆನೆಯೂ ಅದರ ಪಾಡಿಗೆ ಅದು ತನ್ನ ದಾರಿಯಲ್ಲೇ ಸಂಚಾರ ಮಾಡುತ್ತಿದ್ದು,ಯಾರಿಗೂ ತೊಂದರೆ ನೀಡಿದ ಮಾಹಿತಿ ಇಲ್ಲ. ಆದರೂ ರಾತ್ರಿ ವೇಳೆಯಲ್ಲಿ ಈ ಭಾಗದಲ್ಲಿ ಸಂಚರಿಸುವ ಜನರು ಎಚ್ಚರಿಕೆ ವಹಿಸಬೇಕು. ಮತ್ತು ತೊಂದರೆಗಳು ಕಂಡುಬಂದಲ್ಲಿ ಅರಣ್ಯ ಇಲಾಖೆಗೆ ಮಾಹಿತಿ ನೀಡುವಂತೆ ವಿನಂತಿ ಮಾಡಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

28/01/2021 09:06 am

Cinque Terre

23.18 K

Cinque Terre

1

ಸಂಬಂಧಿತ ಸುದ್ದಿ