ಬಂಟ್ವಾಳ: ತಾಲೂಕಿನ ನರಿಂಗಾನ ಗ್ರಾಮ ಹಾಗೂ ಕೇರಳದ ಮಂಜೇಶ್ವರ ತಾಲೂಕಿನ ವರ್ಕಾಡಿ ಗ್ರಾಮದ ಗಡಿ ಪ್ರದೇಶ ತೌಡುಗೋಳಿಯ ಅಂಗನವಾಡಿ ಬಳಿ ರಸ್ತೆಯಲ್ಲಿ ಶುಕ್ರವಾರ ಬೆಳಗ್ಗೆ ಸುಮಾರು ಏಳು ಗಂಟೆಗೆ ಚಿರತೆಯೊಂದು ಅತ್ತಿಂದಿತ್ತ ಸಂಚರಿಸುತ್ತಿರುವುದನ್ನು ಸ್ಥಳೀಯ ಕೆಲವರು ಕಂಡಿದ್ದು, ಈ ಭಾಗದ ನಾಗರಿಕರೀಗ ಆತಂಕಗೊಂಡಿದ್ದಾರೆ.
ಸ್ಥಳೀಯ ಕೋಳಿ ಮಾಂಸ ಮಾರಾಟದ ಅಂಗಡಿಯವರೊಬ್ಬರು ಚಿರತೆ ಸಂಚರಿಸುತ್ತಿರುವುದನ್ನು ಮೊದಲು ಗಮನಿಸಿದ್ದಾರೆ ಎನ್ನಲಾಗಿದೆ.
ಇದಕ್ಕೂ ಮುನ್ನ ಬೆಳಗ್ಗೆ ಆರೂವರೆ ಗಂಟೆ ಹೊತ್ತಿಗೆ ಅಂಗನವಾಡಿಗಿಂತ ಅರ್ಧ ಕಿ. ಮೀ. ದೂರದ ನಿಡ್ಮಾಡ್ ತಿರುವು ರಸ್ತೆಯ ತಂಗುದಾಣದ ಬಳಿ ಚಿರತೆ ನಿಂತಿರುವುದನ್ನು ಮೂರುಗೋಳಿಯಿಂದ ಮಂಗಳೂರಿಗೆ ನಿತ್ಯವೂ ಸ್ಕೂಟರ್ ನಲ್ಲಿ ಸಂಚರಿಸುವ ವ್ಯಕ್ತಿಯೊಬ್ಬರು ಗಮನಿಸಿದ್ದು, ಚಿರತೆ ರಾಯನನ್ನು ಕಂಡು ಹೆದರಿದ ಅವರು, ಸ್ಕೂಟರ್ ತಿರುಗಿಸಿ ವಾಪಸ್ ತೌಡುಗೋಳಿ ಜಂಕ್ಷನ್ ಗೆ ಬಂದು ಸ್ಥಳೀಯರಿಗೆ ಮಾಹಿತಿ ನೀಡಿದ್ದು, ಕೆಲವರು ಹುಡುಕುವ ಪ್ರಯತ್ನ ಮಾಡಿದರಾದರೂ ಚಿರತೆ ಪತ್ತೆಯಾಗಿಲ್ಲ.
Kshetra Samachara
02/01/2021 11:52 am