ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಲ್ಪೆ: ಮೀನು ಬೇಟೆಗೆ ನಾಡದೋಣಿ ಮೀನುಗಾರರು ರೆಡಿ..

ಕಳೆದೆರಡು ವಾರಗಳಿಂದ ಸತತ ಗಾಳಿ ಮಳೆಯಿಂದಾಗಿ ತಮ್ಮ ಬೋಟುಗಳನ್ನು‌ ದಡಕ್ಕೆ ತಂದು ನಿಲ್ಲಿಸಿದ್ದ ನಾಡದೋಣಿ ಮೀನುಗಾರರು ಮೀನು ಬೇಟೆಗೆ ಕಡಲಿಗೆ ಇಳಿದಿದ್ದಾರೆ.

ಪ್ರಕೃತಿ ಮುನಿಸಿ ,ಸಮುದ್ರರಾಜ ಪ್ರಕ್ಷುಬ್ಧಗೊಂಡಿದ್ದರಿಂದ ನಾಡದೋಣಿ ಮೀನುಗಾರರು ಎರಡು ವಾರಗಳಿಂದ ವಿರಾಮ ಪಡೆದಿದ್ದರು. ಇದೀಗ ಕಡಲು ಶಾಂತವಾಗಿದ್ದು ಸಮುದ್ರರಾಜ ಹೇರಳ ಮೀನು ಕೊಡುವ ನಿರೀಕ್ಷೆಯೊಂದಿಗೆ ಸಮುದ್ರಕ್ಕಿಳಿದಿದ್ದಾರೆ. ಆಳಸಮುದ್ರ ಮೀನುಗಾರಿಕೆಗೆ ಇನ್ನೂ ಒಂದು ತಿಂಗಳು ನಿಷೇಧ ಇದೆ. ಆಗಸ್ಟ್ ಹದಿನೈದರ ಬಳಿಕವೇ ಪೂರ್ಣ ಪ್ರಮಾಣದ ಮೀನುಗಾರಿಕೆ ಪ್ರಾರಂಭವಾಗುವುದು ಸಂಪ್ರದಾಯ.

ಆದರೆ ಸ್ಥಳೀಯವಾಗಿ ನಾಡದೋಣಿ ಮೀನುಗಾರರು ಸಣ್ಣಪ್ರಮಾಣದ ಮೀನುಗಾರಿಕೆಯನ್ನು‌ ಮಳೆಗಾಲದಲ್ಲೂ ನಡೆಸುತ್ತಾರೆ. ಈ ಮಧ್ಯೆ ಜುಲೈನಲ್ಲಿ ಗಾಳಿ ಮಳೆ‌ ಮುನ್ಸೂಚನೆ ಮತ್ತು ಕಡಲು ಪ್ರಕ್ಷುಬ್ಧಗೊಂಡಿದ್ದರಿಂದ ಜಿಲ್ಲಾಡಳಿತ ಕಡಲಿಗಿಳಿಯದಂತೆ ಎಚ್ಚರಿಕೆ ನೀಡಿತ್ತು. ಇದೀಗ ಮಳೆ ನಿಂತಿದ್ದು ತಮ್ಮ ಕುಲಕಸುಬಿಗೆ ವಾಪಾಗಿದ್ದಾರೆ.

Edited By :
Kshetra Samachara

Kshetra Samachara

14/07/2022 06:09 pm

Cinque Terre

8.21 K

Cinque Terre

0

ಸಂಬಂಧಿತ ಸುದ್ದಿ