ಕುಕ್ಕೆ ಸುಬ್ರಹ್ಮಣ್ಯ ಪರಿಸರದಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ದೊಡ್ಡ ಅನಾಹುತವೊಂದು ಸಂಭವಿಸಿದೆ. ಮಣ್ಣಿನಡಿ ಸಿಲುಕಿದ್ದ ಇಬ್ಬರು ಮಕ್ಕಳ ಮೃತದೇಹ ಪತ್ತೆಯಾಗಿದೆ.
ಕುಕ್ಕೆ ಸುಬ್ರಹ್ಮಣ್ಯ ಕುಮಾರಧಾರ ಬಳಿಯಲ್ಲಿ ಗುಡ್ಡ ಜರಿದು ಮನೆಯೊಂದು ಕುಸಿದು ಬಿದ್ದು ಇಬ್ಬರು ಮಕ್ಕಳು ಮಣ್ಣಿನೊಳಗೆ ಹೂತು ಹೋಗಿದ್ದರು. ಜೆಸಿಬಿ ಮೂಲಕ ತಡರಾತ್ರಿ ರಕ್ಷಣೆ ಕಾರ್ಯಚರಣೆ ನಡೆಸಲಾಗಿತ್ತು. 11 ವರ್ಷದ ಶ್ರುತಿ ಹಾಗೂ 8 ವರ್ಷದ ಗಾನಶ್ರೀ ಇಬ್ಬರು ಹೆಣ್ಣು ಮಕ್ಕಳ ಮೃತಪಟ್ಟಿದ್ದಾರೆ. ಮನೆಯೊಳಗೆ ನಾಲ್ಕು ಮಂದಿ ಇದ್ದರು ಎನ್ನಲಾಗಿದೆ ಈ ವೇಳೆ ಇಬ್ಬರನ್ನು ರಕ್ಷಿಸಲಾಗಿದೆ.
PublicNext
02/08/2022 12:24 pm