ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಾಪುರ: ಶ್ರೀ ಬ್ರಾಹ್ಮಿ ದುರ್ಗಾಪರಮೇಶ್ವರಿ ಸನ್ನಿಧಿ ತೋಯಿಸಿದ ಕುಬ್ಜೆ

ಕುಂದಾಪುರ: ಉಡುಪಿ ಜಿಲ್ಲೆಯಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಕುಂದಾಪುರ ತಾಲೂಕಿನ ಶ್ರೀ ಬ್ರಾಹ್ಮಿ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಕುಬ್ಜೆ ನದಿ ನೀರು ನುಗ್ಗಿದೆ.

ಸಮೀಪದಲ್ಲೇ ಹರಿಯುವ ಈ ನದಿ ನೀರು ದೇವಸ್ಥಾನದ ಒಳಗೆ ಪ್ರವೇಶಿಸಿದೆ. ಭಾರೀ ಮಳೆಯಾದಾಗ ಕುಬ್ಜಾ ನದಿ ನೀರು ವರ್ಷಕ್ಕೆ ಒಂದು ಬಾರಿ ದೇವಸ್ಥಾನದ ಒಳಗೆ ಪ್ರವೇಶಿಸುವುದು ವಾಡಿಕೆ.

ಆದರೆ, ಈ ವರ್ಷ ಎರಡನೇ ಬಾರಿಗೆ ದೇಗುಲದೊಳಗೆ ನೆರೆ ನೀರು ಪ್ರವೇಶಿಸಿದೆ.

ನದಿನೀರು ಗರ್ಭಗುಡಿಯ ಮೆಟ್ಟಿಲು ತನಕ ಹೋಗಿದ್ದು , ದೇವಸ್ಥಾನದ ಸಿಬ್ಬಂದಿ ಮತ್ತು ಭಕ್ತರು ಕೆಲಕಾಲ ಪರದಾಡುವಂತಾಯಿತು.

ಜಿಲ್ಲೆಯಲ್ಲಿ ನಿನ್ನೆ ರಾತ್ರಿಯಿಂದ ಮಳೆಯ ಅಬ್ಬರ ಇಳಿಮುಖವಾಗಿದೆ.

ಇಂದು ಮುಂಜಾನೆ ಹೊತ್ತಿಗೆ ಮಳೆ ಬಿಡುವು ಪಡೆದಿದ್ದು, ಜನರು ನಿಟ್ಟುಸಿರು ಬಿಡುವಂತಾಗಿದೆ.

Edited By : Nirmala Aralikatti
Kshetra Samachara

Kshetra Samachara

21/09/2020 08:07 am

Cinque Terre

33.03 K

Cinque Terre

0

ಸಂಬಂಧಿತ ಸುದ್ದಿ