ಬೈಂದೂರು: ಜಿಲ್ಲೆಯ ಬೈಂದೂರು ತಾಲೂಕಿನ ಕಾಲ್ತೋಡು ಗ್ರಾಮದಲ್ಲಿ ನಿನ್ನೆ ಏಳರ ಬಾಲಕಿಯೊಬ್ಬಳು ಕಾಲುಸಂಕ ದಾಟುವಾಗ ನೀರಲ್ಲಿ ಕೊಚ್ಚಿ ಹೋಗಿದ್ದಳು. ನೀರುಪಾಲಾಗಿದ್ದ ಸನ್ನಿಧಿ ಎಂಬ ಏಳರ ಬಾಲಕಿಗಾಗಿ ಶೋಧಕಾರ್ಯ ಮುಂದುವರೆದಿದೆ.ಇವತ್ತು ಬೆಳಿಗ್ಗೆ ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಕೂರ್ಮಾರಾವ್ ಭೇಟಿ ನೀಡಿದರು.
ಈ ವೇಳೆ ಗ್ರಾಮಸ್ಥರು ಜಿಲ್ಲಾಧಿಕಾರಿ ಬಳಿ ತಮ್ಮ ಅಳಲು ತೋಡಿಕೊಂಡರು.ಮಕ್ಕಳಿಗೆ ಹೊಳೆ, ತೊರೆ ದಾಟಿ ಹೋಗಲು ಬಹಳ ಕಷ್ಟವಾಗುತ್ತಿದೆ. ಹಲವಾರು ವರ್ಷಗಳಿಂದ ಈ ಭಾಗದಲ್ಲಿ ಅಭಿವೃದ್ಧಿ ಆಗಿಲ್ಲ.ನಮ್ಮೂರಿಗೊಂದು ಸೇತುವೆ ಬೇಕು ಎಂದು ಊರಿನ ಸಮಸ್ಯೆಗಳನ್ನು ಡಿಸಿ ಮುಂದೆ ಕಾಲ್ತೋಡು ಗ್ರಾಮಸ್ಥರು ಹೇಳಿಕೊಂಡರು.ಗ್ರಾಮಸ್ಥರನ್ನು ಸಮಾಧಾನಪಡಿಸಿದ ಡಿಸಿ,ಶೀಘ್ರ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ.
Kshetra Samachara
09/08/2022 11:08 am