ಮಂಗಳೂರು: ಕಳೆದ ಎರಡು- ಮೂರು ವಾರಗಳಿಂದ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕೋಡಿಂಬಾಡಿ, ಸೇಡಿಯಾಪು ಪೆರ್ನೆ ಬೆಳ್ಳಿಪ್ಪಾಡಿ ಭಾಗದಲ್ಲಿ ಕಾಣಿಸಿಕೊಂಡಿದ್ದ ಚಿರತೆ ಬನ್ನೂರು ಗ್ರಾಮದಲ್ಲಿ ಗೋಚರಿಸಿದೆ.
ಬನ್ನೂರು ಗ್ರಾಮದ ಕುಂಟ್ಯಾನ ಶ್ರೀ ಸದಾಶಿವ ದೇವಸ್ಥಾನ ಸಮೀಪದ ಮನೆ ಪಕ್ಕ ಕಾಣಿಸಿಕೊಂಡು ಜನರ ಆತಂಕಕ್ಕೆ ಕಾರಣವಾಯಿತು. ಅಲ್ಲಿದ್ದ ಮಹಿಳೆಯನ್ನು ನೋಡುತ್ತಲೇ ಚಿರತೆ ಘರ್ಜಿಸಿದೆ. ಭಯಭೀತರಾದ ಮಹಿಳೆ ಕಿರುಚಿಕೊಂಡು ಮನೆ ಕಡೆ ಓಡಿದ್ದಾರೆ.
ಸುದ್ದಿ ತಿಳಿದ ಗ್ರಾಮಸ್ಥರು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹುಡುಕಾಟ ನಡೆಸಿದರಾದರೂ ಚಿರತೆ ಕಾಣ ಸಿಗಲಿಲ್ಲ. ಅದೇ ವೇಳೆ ಆಗಮಿಸಿದ ಪೊಲೀಸ್ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ ಚಿರತೆಯ ಶೋಧಕ್ಕೆ ಇಳಿದರಾದರೂ ಪತ್ತೆಯಾಗಿಲ್ಲ.
Kshetra Samachara
25/12/2020 05:02 pm