ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು ಏರ್ ಪೋರ್ಟ್ ತಪ್ಪಲಲ್ಲೊಂದು ಅಪರೂಪದ 'ಲಂಗೂರ್' ದುನಿಯಾ!

ವರದಿ: ಇರ್ಷಾದ್ ಕಿನ್ನಿಗೋಳಿ, ಪಬ್ಲಿಕ್ ನೆಕ್ಸ್ಟ್, ಮಂಗಳೂರು

ಮಂಗಳೂರು: ಸಿಂಗಳೀಕ.. ಬಹುಶಃ ಈ ಹೆಸ್ರು ಕೇಳಿರೋದೆ ಕಡಿಮೆ.. ಇದೊಂದು ಮಂಗನನ್ನೇ ಹೋಲುವ ವಿಭಿನ್ನ ಪ್ರಾಣಿ. ಪರಿಸರ ಸ್ನೇಹಿ ಮಾತ್ರವಲ್ಲದೇ ಇದೊಂದು 'ಪೀಪಲ್ ಫ್ರೆಂಡ್ಲಿ' ಪ್ರಾಣಿ ಕೂಡಾ. ಸಾಮಾನ್ಯವಾಗಿ ಇಂತಹ ಪ್ರಾಣಿಗಳನ್ನ ಮೃಗಾಲಯಗಳಲ್ಲಿ ಇಲ್ಲವೇ ಟಿವಿ ಚಾನೆಲ್ ಗಳಲ್ಲಿ ಕಂಡಿರ್ತೀವಿ. ಆದರೆ ಕಳೆದ ಐದಾರು ವರುಷಗಳಿಂದ ಯಾರ ಗಮನಕ್ಕೂ ಬಾರದೆ ಬೀಡು ಬಿಟ್ಟಿದ್ದ ಸಿಂಗಳೀಕ ಗುಂಪೊಂದನ್ನ ಇದೀಗ ಯುವ ಹವ್ಯಾಸಿ ವನ್ಯಜೀವಿ ಛಾಯಾಚಿತ್ರಗ್ರಾಹಕರು ಸೆರೆ ಹಿಡಿದಿದ್ದಾರೆ. ಮಾತ್ರವಲ್ಲದೇ ತಮ್ಮ ಕ್ಯಾಮೆರಾ ಕಣ್ಣಲ್ಲಿ ಕಂಡ ಸಿಂಗಳೀಕ ಬದುಕನ್ನೇ ಸ್ಟೋರಿ ಬರೆದು ಡಾಕ್ಯುಮೆಂಟ್ ರೂಪದಲ್ಲಿ ಯೂಟ್ಯೂಬ್ ಗಳಲ್ಲಿ ಅಪ್ಲೋಡ್ ಮಾಡಿ, ಅತ್ಯಂತ ಕಡಿಮೆ ಸಂಖ್ಯೆಯಲ್ಲಿ ಕಾಣಸಿಗುವ ಸಿಂಗಳೀಕಗಳ ಕುರಿತಾಗಿ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾರೆ.

ಅಂದಹಾಗೆ ಹವ್ಯಾಸಿ ಛಾಯಾಚಿತ್ರಗ್ರಾಹಕರು ರಚಿಸಿದ ಆ ಡಾಕ್ಯುಮೆಂಟರಿ ಸಿನೆಮಾದ ಹೆಸ್ರು ಅರ್ಬನ್ ಲಂಗೂರ್ ಆಫ್ ಮ್ಯಾಂಗ್ಲೋರ್ ಅಂತಾ. ವೈಲ್ಡ್ ಡಿಕೆ ಹೆಸರಿನಡಿ ತಂಡ ಕಟ್ಟಿಕೊಂಡಿರುವ ಈ ಹವ್ಯಾಸಿ ಛಾಯಾಚಿತ್ರಗ್ರಾಹಕರು ಈ ಸಿಂಗಳೀಕವನ್ನ ಸತತ ಎರಡು ತಿಂಗಳ ಕಾಲ ಅವುಗಳ ಚಲನವಲನದ ಸಾತ್ವಿಕ್, ಧ್ಯಾನ್, ರಾಕೇಶ್ ಗಮನಹರಿಸಿದ್ದಾರೆ. ಅಚ್ಚರಿ ಅಂದ್ರೆ, ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಬಜ್ಪೆ ಸಮೀಪದ ಕೆಂಜಾರು ಪ್ರದೇಶದ ಟೇಬಲ್ ಟಾಪ್ ನಲ್ಲಿದ್ದರೆ, ಅದರ ತಪ್ಪಲಲ್ಲೇ ಇರೋ ರೈಲ್ವೇ ಟ್ರ್ಯಾಕ್ ಗೆ ತಾಗಿಕೊಂಡಿರುವ ಸಣ್ಣದಾದ ಅರಣ್ಯ ಪ್ರದೇಶದಲ್ಲೇ ಈ ಅಪರೂಪದ ಸಿಂಗಳೀಕಗಳ ಗುಂಪೊಂದು ಕಾಣಸಿಗುತ್ತಿದೆ. ಸುಮಾರು 40 ರಷ್ಟು ಲಂಗೂರ್ ಗಳು ಈ ಗುಂಪಿನಲ್ಲಿದ್ದು, ಬೆಳಿಗ್ಗೆ ಅಥವಾ ಸಂಜೆ ಹೊತ್ತಿಗೆ ರೈಲ್ವೇ ಟ್ರ್ಯಾಕ್ ಬಳಿ ಬಂದು ಕೆಲ ಹೊತ್ತು ಕಾಲ ಕಳೆಯುತ್ತದೆ.

ಸಾಮಾನ್ಯವಾಗಿ ಈ ಲಂಗೂರ್ಸ್ ಕರಾವಳಿ ಭಾಗದಲ್ಲೇ ಕಾಣಿಸಿಕೊಳ್ಳೋದು ಜಾಸ್ತಿ. ಗೋವಾ, ಕೇರಳ, ಕರ್ನಾಟಕ ರಾಜ್ಯಗಳಲ್ಲಿ ಕಾಣಸಿಗುತ್ತದೆ. ರಾಜ್ಯದಲ್ಲಿ ಮಣಿಪಾಲ ಹಾಗೂ ಕುದುರೆಮುಖಭಾಗದಲ್ಲಿ ಕಾಣಸಿಗುತ್ತದೆ. ಅದು ಬಿಟ್ಟರೆ ಕೆಂಜಾರಿನಲ್ಲಿ ಕಾಣಸಿಗುತ್ತಿರುವುದು ಖುಷಿಯ ವಿಚಾರ.

ಅರ್ಬನ್ ಲಂಗೂರ್ ಆಫ್ ಮ್ಯಾಂಗ್ಲೋರ್ ಹೆಸರಿನಡಿ ತಯಾರಿಸಲಾದ ಡಾಕ್ಯಮೆಂಟರಿ ಸಿನೆಮಾ ಸುಮಾರು 12 ನಿಮಿಷಗಳದ್ದಾಗಿದೆ. ಈ ಮೂಲಕ ಅಪರೂಪದ ಪ್ರಾಣಿಗಳ ಬಗೆಗಿನ ಕಾಳಜಿಯನ್ನ ಈ ಯುವಕರ ತಂಡ ಹೊಂದಿದೆ. ಆದರೆ ರೈಲುಗಳ ಓಡಾಟ, ರೈಲ್ವೇ ಹೈಟೆನ್ಶನ್ ತಂತಿ, ಅರಣ್ಯಗಳ ನಾಶ ಇವುಗಳೆಲ್ಲವೂ ಲಂಗೂರ್ಸ್ ಮೇಲೆ ಅಡ್ಡ ಪರಿಣಾಮ ಬೀರೋ ಸಾಧ್ಯತೆಯೂ ಇದ್ದು, ಆದ್ದರಿಂದ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಇವುಗಳನ್ನ ಸಂರಕ್ಷಿಸುವ ಕೆಲಸವನ್ನ ಮಾಡಬೇಕಿದೆ.

Edited By : Nagesh Gaonkar
Kshetra Samachara

Kshetra Samachara

06/11/2020 02:47 pm

Cinque Terre

21.83 K

Cinque Terre

2

ಸಂಬಂಧಿತ ಸುದ್ದಿ