ಬೈಂದೂರು: ನಾಡದೋಣಿ ಅವಘಡ ಸಂಭವಿಸಿದ ಪರಿಣಾಮ ಇಬ್ಬರು ಮೀನುಗಾರರು ನೀರುಪಾಲಾದ ಘಟನೆ ಉಡುಪಿ ಜಿಲ್ಲೆಯ ಬೈಂದೂರಿನಲ್ಲಿ ನಡೆದಿದೆ.
ಬೈಂದೂರು ನಿವಾಸಿಗಳಾದ ಶರಣ್ ( 25 ) ಮತ್ತು ಅಣ್ಣಪ್ಪ ( 30 ) ನೀರುಪಾಲಾದ ನತದೃಷ್ಡ ಮೀನುಗಾರರು.
ಬೈಂದೂರು ತಾಲೂಕಿನ ಅಳಿವೆಬಾಗಿಲಿನಲ್ಲಿ ಈ ದುರ್ಘಟನೆ ಸಂಭವಿಸಿದೆ.ನಿನ್ನೆ ಮೀನುಗಾರಿಕೆಗೆ ತೆರಳಿ ಬಂದರಿಗೆ ಹಿಂದಿರುಗುವ ವೇಳೆ ಈ ಅವಘಡ ಸಂಭವಿಸಿದೆ.
ಬಂದರಿಗೆ ಕೆಲವೇ ದೂರ ಇರುವಾಗಲೇ ಸಮುದ್ರದ ಅಲೆಗೆ ದೋಣಿ ಮುಗುಚಿದ ಪರಿಣಾಮ ಅವಘಡ ಸಂಭವಿಸಿತು.ಸ್ಥಳೀಯ ಮೀನುಗಾರರು, ಬೈಂದೂರು ಪೊಲೀಸರು ಹಾಗೂ ಅಗ್ನಿಶಾಮಕ ದಳದಿಂದ ಹುಡುಕಾಟ ಮುಂದುವರೆದಿದೆ.ಬೈಂದೂರು ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
18/09/2021 10:27 am