ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಜಪೆ: ಪೆರ್ಮುದೆಯಲ್ಲಿ ಬೃಹತ್ ಹೊಂಡಕ್ಕೆ ಬಿದ್ದ ದನ ರಕ್ಷಿಸಿದ ಯುವಕರು

ಮುಲ್ಕಿ: ಬಜಪೆ ಸಮೀಪದ ಪೆರ್ಮುದೆಯಲ್ಲಿ ಮೇಯಲು ಬಿಟ್ಟ ದನವೊಂದು ಭಾರಿ ಆಳದ ಹೊಂಡಕ್ಕೆ ಬಿದ್ದು ಒದ್ದಾಡುತ್ತಿರುವುದನ್ನು ಕಂಡ ಸ್ಥಳೀಯ ಕ್ರಿಶ್ಚಿಯನ್ ಯುವಕರು ಜೆಸಿಬಿ ಮೂಲಕ ಮೇಲಕ್ಕೆತ್ತಿ ರಕ್ಷಿಸಿದ್ದಾರೆ.

ಬಜಪೆ ಸಮೀಪದ ಪೆರ್ಮುದೆ ಬಳಿಯ ಪಾಸ್ಕಲ್ ಎಂಬವರ ಮನೆಯು ರಸ್ತೆ ಬಳಿಯಿಂದ ತಗ್ಗು ಪ್ರದೇಶದಲ್ಲಿದ್ದು, ಮೇಯಲು ಬಿಟ್ಟ ದನ ಆಹಾರ ಹುಡುಕುತ್ತಾ ಮನೆಯ ಹಿಂಭಾಗದ ಸುಮಾರು 10 ಅಡಿ ಆಳದ ಗುಂಡಿಯಲ್ಲಿ ಸಂಜೆ ವೇಳೆಗೆ ಬಿದ್ದಿದೆ. ಮಾರನೇ ದಿನ ಮನೆಯವರು ದನವನ್ನು ಹುಡುಕುತ್ತಿರುವಾಗ ಮನೆ ಹಿಂಭಾಗದಲ್ಲಿ ದನ ಬಿದ್ದಿರುವುದು ಕಂಡು ಬಂದಿದ್ದು ಅಲ್ಪಸ್ವಲ್ಪ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದೆ. ಕೂಡಲೇ ಸ್ಥಳೀಯ ಯುವಕರಾದ ಜಾರ್ಜ್ ಫರ್ನಾಂಡಿಸ್, ಆಲ್ಫೋನ್ಸ್ ಫರ್ನಾಂಡಿಸ್, ರಾಯಲ್ ಪಿಂಟೊ ಮತ್ತಿತರರು ಸೇರಿಕೊಂಡು ಜೆಸಿಬಿ ಮೂಲಕ ದನಕ್ಕೆ ಬೆಲ್ಟ್ ಕಟ್ಟಿ ಮೇಲಕ್ಕೆತ್ತಿದ್ದಾರೆ. ದನವನ್ನು ಮೇಲಕ್ಕೆತ್ತಿದ ಯುವಕರ ಸಾಹಸಕ್ಕೆ ಸ್ಥಳೀಯರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

07/10/2020 10:38 am

Cinque Terre

42.51 K

Cinque Terre

4

ಸಂಬಂಧಿತ ಸುದ್ದಿ