ಮಂಗಳೂರು: ಬಣ್ಣ ಬಣ್ಣದ ಸುಂದರ ಚಿಪ್ಪಿನೊಳಗೆ ಅವಿತಿರುವ ಈ ಜಲಚರ ಜೀವಿ ಕರಾವಳಿ ಪ್ರದೇಶದಲ್ಲಿ 'ಪಚ್ಚಿಲೆ' ಎಂದು ಜನಜನಿತ. ಸಿಗಡಿ, ಏಡಿ, ಮರುವಾಯಿ, ಬೊಂಡಾಸ್ ಮತ್ತಿತರ ಸವಿರುಚಿಯ ಮತ್ಸ್ಯ ಉತ್ಪನ್ನಗಳಂತೆಯೇ ಪಚ್ಚಿಲೆಯಿಂದಲೂ ವಿವಿಧ ಬಗೆಯ ಪದಾರ್ಥ, ತಿಂಡಿ- ಖಾದ್ಯಗಳನ್ನು ತಯಾರಿಸುತ್ತಾರೆ.
ಹೆಚ್ಚಾಗಿ ಉಪ್ಪುನೀರಿನ ನದಿ ಹಾಗೂ ಸಮುದ್ರದಲ್ಲಿ ಈ ಚಿಪ್ಪು ಮೀನು ಕಂಡುಬರುತ್ತವೆ. ಮುಖ್ಯವಾಗಿ ಬಂಡೆಕಲ್ಲುಗಳು ಇದರ ವಾಸ ಸ್ಥಾನ. ಕೆಲವೆಡೆ ನಾನಾ ವಿಧಾನ ಮೂಲಕದ 'ಪಚ್ಚಿಲೆ ಕೃಷಿ' ಹಲವರಿಗೆ ಪೂರ್ಣಾವಧಿ ಉದ್ಯೋಗವೂ ಆಗಿದೆ. ಅತ್ಯುತ್ತಮ ಪೌಷ್ಟಿಕಾಂಶಯುಕ್ತ ಆಹಾರವಾದ್ದರಿಂದ ಬಹು ಬೇಡಿಕೆಯಿದೆ. ಸ್ಥಳೀಯ ಮಾರುಕಟ್ಟೆಗೆ ಬಂದರೆ ಬಲು ಬೇಗನೇ ಬಿಕರಿಯಾಗುತ್ತವೆ.
ಈ ವೀಡಿಯೊದಲ್ಲಿ ಪಚ್ಚಿಲೆಯಿಂದ ಸಾಂಪ್ರದಾಯಿಕ ರೀತಿಯಲ್ಲಿ ಅಷ್ಟೇ ಸರಳವಾಗಿ 'ಪುಂಡಿ' ಮಾಡುವಂತೆಯೇ ಕರಿದ ತಿಂಡಿ ಮಾಡುವ ವಿಧಾನವನ್ನು ತೋರಿಸಲಾಗಿದೆ.
Kshetra Samachara
09/09/2021 04:29 pm