ಬೆಂಗಳೂರು : ಅಯೋಧ್ಯೆಯ ಶ್ರೀರಾಮಜನ್ಮ ಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ನ ವಿಶ್ವಸ್ಥ ಪೇಜಾವರ ಶ್ರೀ ವಿಶ್ವ ಪ್ರಸನ್ನ ತೀರ್ಥ ಶ್ರೀಪಾದರಿಗೆ ರಾಜ್ಯ ಸರ್ಕಾರವು ವೈ ಶ್ರೇಣಿ ಭದ್ರತೆ ಮಂಜೂರು ಮಾಡಿದೆ.
ರಾಮಮಂದಿರದ ನಿರ್ಮಾಣದ ಜನಜಾಗೃತಿ ಅಭಿಯಾನದಲ್ಲಿ ನಿರತರಾಗಿರುವ ಶ್ರೀಗಳು ದೇಶಾದ್ಯಂತ ಸಂಚಾರ ಕೈಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಅವರಿಗೆ ಸೂಕ್ತ ಭದ್ರತೆ ಒದಗಿಸಲಾಗಿದೆ.
ಪೇಜಾವರ ಶ್ರೀಗಳಿಗೆ ಸೂಕ್ತ ಭದ್ರತೆ ನೀಡುವಂತೆ ಉಡುಪಿ ಶಾಸಕ ಕೆ. ರಘುಪತಿ ಭಟ್ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಶಾಸಕರ ಮನವಿಗೆ ಸ್ಪಂದಿಸಿದ ಸರ್ಕಾರವು ಶ್ರೀಗಳಿಗೆ ವೈ ಶ್ರೇಣಿಯ ಭದ್ರತೆ ಮಂಜೂರು ಮಾಡಿದೆ.
Kshetra Samachara
01/01/2021 03:01 pm