ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ದೇವಸ್ಥಾನ ಸಮೀಪವೇ ಅಕ್ರಮ ಕಲ್ಲು ಗಣಿಗಾರಿಕೆ: ದಾಳಿ ನಡೆಸಿದ ಇಲಾಖೆಯಿಂದ ಸೊತ್ತುಗಳ ವಶ!

ಬ್ರಹ್ಮಾವರ: ಇಲ್ಲಿನ ಹೊಸೂರು ಕರ್ಜೆಯ ಶ್ರೀ ನಾಗಬ್ರಹ್ಮಲಿಂಗೇಶ್ವರ ದೇವಸ್ಥಾನದ ಬಳಿ ಆಕ್ರಮ ಗಣಿಗಾರಿಕೆ ಸ್ಥಳಕ್ಕೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ದಾಳಿ ಮಾಡಿದೆ. ಕೆಳಬೆಟ್ಟು ಜಯರಾಜ್ ಶೆಟ್ಟಿ ಎಂಬವರು ನೀಡಿದ ದೂರಿನ ಮೇರೆಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು, ಬ್ರಹ್ಮಾವರ ಪೋಲೀಸರು ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಜಂಟಿಯಾಗಿ ದಾಳಿ ಮಾಡಿದ್ದಾರೆ. ದಾಳಿ ನಡೆಸಿ ಗಣಿಗಾರಿಕೆಗೆ ಸಂಬಂದಪಟ್ಟ 4 ಟಿಪ್ಪರ್, 1 ಹಿಟಾಚಿ ಮತ್ತು ಕಂಪ್ರೆಶರನ್ನು ಮುಟ್ಟುಗೋಲು ಹಾಕಿದ ಘಟನೆ ನಡೆದಿದೆ.

ದೇವಸ್ಥಾನಕ್ಕೆ ಬಳಿಯ ಜಯರಾಜ್ ಶೆಟ್ಟಿ ಎಂಬವರು ತಮ್ಮ ಕುಟುಂಬಸ್ಥರ ಜಾಗದಲ್ಲಿ ಅಕ್ರಮವಾಗಿ ಬಂಡೆಕಲ್ಲುಗಳನ್ನು ತೆಗೆಯುತ್ತಿರುವ ಬಗ್ಗೆ ಇಲಾಖೆಯ ಗಮನಕ್ಕೆ ತಂದಿದ್ದರು. ಅದರಂತೆ ದಾಳಿ ನಡೆಸಿದ ಅಧಿಕಾರಿಗಳು ಸೊತ್ತುಗಳನ್ನು ಮುಟ್ಟುಗೋಲು ಹಾಕಿ ದಂಡ ವಿಧಿಸಿದ್ದಾರೆ.

ಈ ಪ್ರದೇಶದಲ್ಲಿ ಬಂಡೆಕಲ್ಲುಗಳನ್ನು ಸ್ಪೋಟಿಸಿ, ಅಕ್ರಮವಾಗಿ ಕಲ್ಲುಗಳನ್ನು ಸಾಗಿಸಲಾಗುತ್ತಿತ್ತು. ದಾಳಿಯಲ್ಲಿ ಭೂ ವಿಜ್ಞಾನಿ ಹಾಜಿರಾ , ಗಣಿ ಇಲಾಖೆಯ ಉಪ ನೀರೀಕ್ಷಕ ಮಹಾದೇವಪ್ಪ, ಬ್ರಹ್ಮಾವರ ಠಾಣಾಧಿಕಾರಿ ಗುರುನಾಥ್ ಬಿ ಹಾದಿಮನೆ, ಪಿಎಸ್‌ಐ ಸುಂದರ್, ಕಂದಾಯ ನೀರೀಕ್ಷಕ ಲಕ್ಷ್ಮೀ ನಾರಾಯಣ ಭಟ್, ಗ್ರಾಮ ಲೆಕ್ಕಿಗ ರಾಜಾ ಸಾಬ್ ಮತ್ತಿತರರು ಭಾಗಿಯಾದರು.

Edited By :
Kshetra Samachara

Kshetra Samachara

16/03/2022 05:51 pm

Cinque Terre

25.99 K

Cinque Terre

0

ಸಂಬಂಧಿತ ಸುದ್ದಿ