ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಇಂದ್ರಾಳಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ; ಫುಲ್ ಟ್ರಾಫಿಕ್ ಜಾಮ್!

ಉಡುಪಿ: ವಾಹನ ಸವಾರರಿಗೆ ತೀವ್ರ ಸಮಸ್ಯೆಯಾಗಿ ಪರಿಣಮಿಸಿದ್ದ, ಇಂದ್ರಾಳಿ ಸೇತುವೆ ರಸ್ತೆ (ರಾ. ಹೆ. 169 ಎ) ಕಾಮಗಾರಿ ಭರದಿಂದ ಸಾಗಿದೆ.

ಒಂದು ಬದಿಯಲ್ಲಿ ಕಾಮಗಾರಿ ನಡೆಯುತ್ತಿರುವುದರಿಂದ ಇನ್ನೊಂದು ಬದಿಯಲ್ಲಿ ಮಾತ್ರ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಇದರಿಂದಾಗಿ ಇಂದ್ರಾಳಿ ಸೇತುವೆ ಸಮೀಪ ದೊಡ್ಡ ಪ್ರಮಾಣದಲ್ಲಿ ಸಂಚಾರ ದಟ್ಟಣೆ ಉಂಟಾಗಿದೆ. ಸಂಜೆ ಮತ್ತು ಬೆಳಿಗಿನ ಪೀಕ್ ಅವರ್ ನಲ್ಲಿ ಇಂದ್ರಾಳಿಯಿಂದ ಎಂಜಿಎಂವರೆಗೂ ವಾಹನಗಳು ಬಹಳ ಹೊತ್ತು ನಿಂತು ನಿಂತು ಮುಂದಕ್ಕೆ ಹೋಗಬೇಕಾಯ್ತು.

ಇನ್ನೊಂದು ಕಡೆಯಲ್ಲಿ ಇಂದ್ರಾಳಿ ಬಸ್‌ನಿಲ್ದಾಣವರೆಗೂ ಸಂಚಾರ ದಟ್ಟಣೆಯಿಂದ ಕೂಡಿರುತ್ತದೆ. ಈ ರಸ್ತೆಯಲ್ಲಿ ಈಗಾಗಲೇ ಭಾರಿ ವಾಹನಗಳನ್ನ ನಿಷೇಧಿಸಲಾಗಿದ್ದು, ಲಘು ವಾಹನ ಸವಾರರು ರಸ್ತೆ ಕಾಮಗಾರಿ ಪೂರ್ಣಗೊಳ್ಳುವತನಕ ಟ್ರಾಫಿಕ್ ಕಿರಿಕಿರಿ ಎದುರಿಸಬೇಕಾಗಿದೆ.

Edited By : Manjunath H D
PublicNext

PublicNext

07/10/2022 03:26 pm

Cinque Terre

34.68 K

Cinque Terre

0

ಸಂಬಂಧಿತ ಸುದ್ದಿ