ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬ್ರಹ್ಮಾವರ: ಅರ್ಧಂಬರ್ಧ ಕಾಮಗಾರಿಯಿಂದ ಸವಾರರಿಗೆ ಅಪಾಯಕ್ಕೆ ಅಹ್ವಾನ

ಬ್ರಹ್ಮಾವರ: ಉಡುಪಿ ಬ್ರಹ್ಮಾವರ ಬಾರಕೂರು ರಾಜ್ಯ ಹೆದ್ದಾರಿಯ ಅರ್ದಂಬರ್ಧ ರಸ್ತೆ ಕಾಮಗಾರಿಯಿಂದಾಗಿ ಬ್ರಹ್ಮಾವರ ಬಳಿಯ ಹಂದಾಡಿಯಲ್ಲಿ ಅಪಾಯಕ್ಕೆ ಆಹ್ವಾನ ನೀಡುವಂತೆ ರಸ್ತೆ ಮತ್ತು ನೀರು ಹರಿಯುವ ತೋಡು ಬಾಯಿತೆರೆದು ನಿಂತಿದೆ. ಇಲ್ಲಿನ ರಸ್ತೆ ಕಾಮಗಾರಿ ಎರಡು ವರ್ಷದಿಂದ ಕುಂಟುತ್ತಾ ಸಾಗುತ್ತಿದೆ.

ಪ್ರತಿದಿನ ಸಹಸ್ರಾರು ವಾಹನಗಳು ಸಂಚರಿಸುವ ಈ ರಸ್ತೆಯ ಅಗಲೀಕರಣ ಕಾಮಗಾರಿ ಅದೇಕೋ ಆಮೆಗತಿಯಲ್ಲಿ ನಡೆಯುತ್ತಿದೆ. ಹಂದಾಡಿಯಲ್ಲಿ ಹರಿಯುವ ಕಿರು ತೋಡೊಂದಕ್ಕೆ ಸೇತುವೆ ಮತ್ತು ನೀರು ಸರಾಗವಾಗಿ ಹರಿದು ಹೋಗಲು ಮಾಡುತ್ತಿದ್ದ ಕಾಮಗಾರಿ ಒಂದು ಕಡೆ ಮಾತ್ರ ಮಾಡಿ ಇನ್ನೊಂದು ಕಡೆ ಹಾಗೇ ಬಾಯಿ ತೆರೆದುಕೊಂಡಿದ್ದು ಹಲವು ದಿನಗಳಿಂದ ಹೀಗೇ ಇದೆ.

ಹಗಲು ಹೊತ್ತಿನಲ್ಲಿ ಹೇಗೋ ಸಂಚರಿಸಬಹುದು. ಆದರೆ ರಾತ್ರಿ ಹೊತ್ತು ಘನ ವಾಹನ ಸವಾರರು ಅಥವಾ ತಿಳಿಯದವರು ಎರಡು ವಾಹನ ಒಟ್ಟಾಗುವ ಸಂದರ್ಭದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ. ಇನ್ನು ಇಲ್ಲಿ ಕಾಮಗಾರಿ ನಡೆಯುತ್ತಿರುವ ಕುರಿತು ಸೂಚನಾ ಫಲಕವೂ ಇಲ್ಲ. ಸಂಬಂಧಪಟ್ಟವರು ಅಪಾಯ ಸಂಭವಿಸುವ ಮೊದಲು ಸೂಕ್ತ ವ್ಯವಸ್ಥೆ ಮಾಡಬೇಕಾಗಿದೆ.

Edited By : Manjunath H D
Kshetra Samachara

Kshetra Samachara

07/09/2022 06:28 pm

Cinque Terre

10.66 K

Cinque Terre

0

ಸಂಬಂಧಿತ ಸುದ್ದಿ