ಕುಂದಾಪುರ: ಪುರಸಭೆ ವ್ಯಾಪ್ತಿಯ ಪ್ರಮುಖ ರಸ್ತೆಯೊಂದನ್ನು ಸ್ಥಳೀಯರು ಹುಡುಕಬೇಕಾದ ಪರಿಸ್ಥಿತಿನಿರ್ಮಾಣಗೊಂಡಿದೆ.ಕಾರಣ ನಗರದಿಂದ ಬರೆಕಟ್ಟು ಎಂಬಲ್ಲಿಗೆ ಸಂಪರ್ಕ ಕಲ್ಪಿಸುವ ಹೊನ್ನನಕೆರೆ ರಸ್ತೆಯೇ ಈಗ ಮಾಯವಾಗಿದೆ!
ಹೊಂಡ ಗುಂಡಿಗಳಿಂದ ತುಂಬಿದ್ದ ಈ ರಸ್ತೆಯ ರಿಪೇರಿಗಾಗಿ ಬಹಳ ಸಮಯದಿಂದಲೂ ಸ್ಥಳೀಯರು ಪುರಸಭೆಗೆ ಮನವಿ ಸಲ್ಲುಸುತ್ತಲೇ ಇದ್ದಾರೆ.ಪುರಸಭೆಯ ಅಧಿಕಾರಿಗಳು ಜಾಣ ಕುರುಡು ಪ್ರದರ್ಶಿಸುತ್ತಲೇ ಇದ್ದು, ಇದೀಗ ಮಳೆಗಾಲ ಬಂದೇ ಬಿಟ್ಟಿದೆ. ಆರಂಭದ ಮಳೆಗೇ ರಸ್ತೆ ಗುಂಡಿಗಳಲ್ಲಿ ನೀರು ತುಂಬಿ ಈ ರಸ್ತೆ ಇದೀಗ ಹೆಸರಿಗೆ ತಕ್ಕಹಾಗೆಯೇ ಹೊನ್ನ ಕೆರೆಯೇ ಆಗಿದೆ. ಕೆಸರು ರಾಡಿ ನೀರು ತುಂಬಿ ಕೆರೆಯ ರೀತಿ ಗಬ್ಬೆದ್ದು ಹೋಗಿದೆ!
ಮುಂಗಾರು ಪ್ರಾರಂಭಗೊಳ್ಳುವ ಮುನ್ನವೇ ಪುರಸಭೆಯವರು ಈ ಹೊನ್ನನಕೆರೆ ರಸ್ತೆಯನ್ನು ರಿಪೇರಿ ಮಾಡಿ ಸಂಚಾರಕ್ಕೆ ಯೋಗ್ಯವಾಗಿಸಬೇಕು. ಕಟ್ಟಿದ ಮೋರಿ, ಚರಂಡಿಗಳ ಹೂಳೆತ್ತಿ, ದಾರಿದೀಪಗಳನ್ನು ದುರಸ್ತಿಮಾಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
Kshetra Samachara
18/06/2022 05:54 pm