ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು-ದೆಹಲಿ ನೇರ ವಿಮಾನ ಸಂಚಾರ ಜುಲೈ 1ರಿಂದ ಶುರು

ಮಂಗಳೂರು : ಕೋವಿಡ್ನಿಂದ ಕಳೆದ 2 ವರ್ಷಗಳಿಂದ ಸ್ಥಗಿತಗೊಂಡಿದ್ದ ಮಂಗಳೂರು-ದೆಹಲಿ ನೇರ ವಿಮಾನ ಸಂಚಾರ ಜುಲೈ 1ರಿಂದ ಮತ್ತೆ ಆರಂಭವಾಗಲಿದೆ. ಇನ್ನು ಮುಂದೆ ದೆಹಲಿಗೆ ವಾರದಲ್ಲಿ ನಾಲ್ಕು ಬಾರಿ ಇಂಡಿಗೋ ವಾಯುಯಾನ ಕಂಪನಿಯ ತಡೆರಹಿತ ವಿಮಾನವು ಮಂಗಳೂರಿನಿಂದ ಸಂಚಾರ ನಡೆಸಲಿದೆ.

ಭಾನುವಾರ, ಸೋಮವಾರ, ಬುಧವಾರ, ಶುಕ್ರವಾರ ಮಂಗಳೂರು-ದೆಹಲಿ ನಡುವಿನ ನೇರ ವಿಮಾನ ಸೇವೆ ಲಭ್ಯವಿರುತ್ತದೆ. ಕೊರೋನಾ ಜಗತ್ತಿಗೆ ಕಾಲಿಟ್ಟ ನಂತರ ಮಂಗಳೂರಿನಿಂದ ದೆಹಲಿಗೆ ಪ್ರಯಾಣಿಸುವುದು ಕಠಿಣವಾಗಿತ್ತು.ಏಕೆಂದರೆ ಪ್ರಯಾಣಿಕರು ಮಂಗಳೂರಿನಿಂದ ಬೆಂಗಳೂರು, ಚೆನ್ನೈ, ಪುಣೆ ಮುಂಖಾಂತರ ದೆಹಲಿಗೆ ತೆರಳಬೇಕಾದ ಅನಿವಾರ್ಯತೆ ಎದುರಾಗಿದ್ದು, ಇದರಿಂದ ವಿಮಾನಕ್ಕೆ ಅಧಿಕ ವೆಚ್ಚ ತೆರಬೇಕಾಗಿತ್ತು.

ಇದೀಗ ನೇರ ವಿಮಾನಯಾನ ಪುನರಾರಂಭವಾಗಲಿರುವುದರಿಂದ ಪ್ರಯಾಣಿಕರು ನಿಟ್ಟುಸಿರು ಬಿಡುವಂತಾಗಿದೆ.

Edited By : Nirmala Aralikatti
Kshetra Samachara

Kshetra Samachara

03/06/2022 07:12 pm

Cinque Terre

3.49 K

Cinque Terre

0

ಸಂಬಂಧಿತ ಸುದ್ದಿ