ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಗಬ್ಬೆದ್ದು ನಾರುತ್ತಿದೆ ಕೊಳೆತ ಕಸದ ರಾಶಿ: ಉಸಿರಾಡಲೂ ಇಲ್ಲಿ ಕಷ್ಟದ ಪರಿಸ್ಥಿತಿ

ಮಂಗಳೂರು: ಒಂದು ಕಡೆ ರಾಶಿ ರಾಶಿ ಕಸದ ಮೂಟೆ..ಇನ್ನೊಂದು ಕಡೆ ರಾಶಿಗಟ್ಟಲೆ ಮದ್ಯದ ಬಾಟೆಲ್. ಅಷ್ಟಕ್ಕೂ ಈ ದೃಶ್ಯ ಕಂಡುಬಂದಿದ್ದು ಐಕಳ ಗ್ರಾಮ ಪಂಚಾಯತ್ ವ್ಯಾಪ್ತಿಯ ಕುಕ್ಕಟ್ಟೆ ಎಂಬಲ್ಲಿ.

ಕಿನ್ನಿಗೋಳಿಯಿಂದ ಮೂರುಕಾವೇರಿ ಮೂಲಕ ಸಾಗಿದಾಗ ದಾಮಸ್ಕಟ್ಟೆಯಿಂದ ಬಳಕುಂಜೆಗೆ ಸಾಗುವಂತಹ ರಸ್ತೆಯ ಕುಕ್ಕಟ್ಟೆ ಎಂಬಲ್ಲಿ ರಸ್ತೆಯ ಅಂಚಿನ ಗುಡ್ಡ ಪ್ರದೇಶದಲ್ಲಿ ಈ ಕಸದ ರಾಶಿ ಇದೆ. ಇಲ್ಲಿಂದ ಸ್ವಲ್ಪ ದೂರದಲ್ಲೇ ಕೆಲವೊಂದು ಮನೆಗಳು ಕೂಡ ಇದೆ. ಕಸದ ರಾಶಿಯು ಕೊಳೆತು ಗಬ್ಬುನಾತ ಬೀರುತ್ತಿರುವುದರಿಂದ ರಸ್ತೆಯಲ್ಲಿ ಸಂಚರಿಸುವಂತಹ ವಾಹನ ಸವಾರರು ಹಾಗೂ ಸಾರ್ವಜನಿಕರು ಉಸಿರಾಡಲೂ ಕಷ್ಟದ ಪರಿಸ್ಥಿತಿ ಇದೆ.

ಕಳೆದ ಕೆಲವು ತಿಂಗಳುಗಳಿಂದ ಕುಕ್ಕಟ್ಟೆಯ ರಸ್ತೆಯಂಚಿನ ಗುಡ್ಡದಲ್ಲಿ ಸಮತಟ್ಟು ಮಾಡಲಾಗಿದ್ದ ಸ್ಥಳದಲ್ಲಿ ಕಸದ ರಾಶಿ ಸಂಗ್ರಹವಾಗ್ತಿದೆ. ಕಸ ವಿಲೇವಾರಿ ಮಾಡುವಂತಹ ವಾಹನ ಸವಾರರು ಇಲ್ಲಿ ಕಸವನ್ನು ಸುರಿಯುತ್ತಿದ್ದಾರೆಯೇ ಎಂಬ ಅನುಮಾನ ವ್ಯಕ್ತವಾಗಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ವಾಹನ ಹೋಗಲು ರಸ್ತೆಯನ್ನು ಕೂಡ ಮಾಡಲಾಗಿದ್ದು ಈ ಅನುಮಾನಕ್ಕೆ ಪುಷ್ಠಿ ಕೊಡುವಂತಿದೆ. ಯಾರೇ ಆಗಿದ್ರೂ ಇಲ್ಲಿ ಕಸ ತಂದು ಸುರಿಯುವವರ ಮೇಲೆ ಸೂಕ್ತ ಕ್ರಮವನ್ನು ಸಂಬಂಧಪಟ್ಟ ಗ್ರಾಮ ಪಂಚಾಯತ್ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

Edited By : Manjunath H D
Kshetra Samachara

Kshetra Samachara

03/06/2022 12:31 pm

Cinque Terre

11.89 K

Cinque Terre

0

ಸಂಬಂಧಿತ ಸುದ್ದಿ