ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಕಾರ್ನಾಡ್‌ನಲ್ಲಿ ತ್ಯಾಜ್ಯ ಹಾಗೂ ಪ್ಲಾಸ್ಟಿಕ್ ಬಾಟಲ್‌ಗಳ ಪರಿಸರ ಸ್ನೇಹಿ ಬೆಂಚ್ ಲೋಕಾರ್ಪಣೆ

ಮುಲ್ಕಿ: ಮುಲ್ಕಿ ನಗರ ಪಂಚಾಯತ್ ವ್ಯಾಪ್ತಿಯ ಕಾರ್ನಾಡು ಗಾಂಧಿ ಮೈದಾನದಲ್ಲಿ ಮಂಗಳೂರಿನ ಸಿಒಡಿಪಿ ವತಿಯಿಂದ ನಿರ್ಮಾಣಗೊಂಡ

ಪರಿಸರಸ್ನೇಹಿ ಸಿಮೆಂಟ್ ಬೆಂಚ್‌ಅನ್ನು ಡಿವೈನ್ ಕಾಲ್ ಸೆಂಟರ್‌ನ ಗುರುಗಳಾದ ಫಾ. ಅಬ್ರಹಾಂ ಹಾಗೂ ಮುಲ್ಕಿ ನ.ಪಂ ಮುಖ್ಯಾಧಿಕಾರಿ ಚಂದ್ರ ಪೂಜಾರಿ ಲೋಕಾರ್ಪಣೆಗೊಳಿಸಿದರು.

ಈ ಸಂದರ್ಭ ಮುಲ್ಕಿ ನ.ಪಂ ಮುಖ್ಯಾಧಿಕಾರಿ ಚಂದ್ರ ಪೂಜಾರಿ ಮಾತನಾಡಿ ತ್ಯಾಜ್ಯ ಹಾಗೂ ಪ್ಲಾಸ್ಟಿಕ್ ಬಾಟಲ್‌ಗಳಿಂದ ಪರಿಸರಸ್ನೇಹಿ ಬೆಂಚ್ ನಿರ್ಮಾಣದ ಮೂಲಕ ಸಂಘಟನೆಗಳ ಕಾರ್ಯ ಶ್ಲಾಘನೀಯವಾಗಿದೆ ಎಂದರು.

ಫಾದರ್ ಅಬ್ರಹಾಂ ಮಾತನಾಡಿ ತ್ಯಾಜ್ಯ ವಸ್ತುಗಳನ್ನು ಎಲ್ಲೆಂದರಲ್ಲಿ ಬಿಸಾಡಿ ಪರಿಸರ ಮಾಲಿನ್ಯ ಮಾಡುತ್ತಿರುವ ವ್ಯಕ್ತಿಗಳಿಗೆ ಸಂಘಟನೆಗಳು ನಡೆಸುತ್ತಿರುವ ಪರಿಸರಸ್ನೇಹಿ ಕಾರ್ಯ ಮಾದರಿಯಾಗಿದ್ದು ನಾಗರಿಕರು ಜಾಗೃತರಾಗಿ ಸಂಘಟನೆ ಜೊತೆ ಕೈಜೋಡಿಸಿ ಇನ್ನಷ್ಟು ಜನಪರ ಕೆಲಸಗಳನ್ನು ಮಾಡಲು ಮುಂದೆ ಬರಬೇಕು ಎಂದರು.

ಮಂಗಳೂರಿನ ಕ್ಯಾನ್ಸರ್ ಆರ್ಗನೈಸೇಷನ್ ಫಾರ್ ಡೆವಲಪ್‌ಮೆಂಟ್ ಅಂಡ್ ಪೀಸ್‌ನ ಪುಷ್ಪವೇಣಿ ಮಾತನಾಡಿ ಪ್ರತಿ ಮನೆಗೆ ತೆರಳಿ ಜನರಿಗೆ ಪ್ಲಾಸ್ಟಿಕ್‌ನಿಂದ ಆಗುವ ಅನಾಹುತದ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸುಮಾರು 19 ಕಡೆ ಪರಿಸರಸ್ನೇಹಿ ಬೆಂಚ್ ನಿರ್ಮಾಣ ನಡೆದಿದೆ. ಪ್ಲಾಸ್ಟಿಕ್ ಬಾಟಲಿ ಹಾಗೂ ತ್ಯಾಜ್ಯಗಳನ್ನು ಎಸೆಯುವ ಹಾಗೂ ಹೊತ್ತಿಸುವ ಬಗ್ಗೆ ಪ್ರತಿ ಮನೆಗೆ ತೆರಳಿ ಜಾಗೃತಿ ಮೂಡಿಸುವ ಯತ್ನ ಹಾಗೂ ಪ್ಲಾಸ್ಟಿಕ್‌ಗಳನ್ನು ರಿಸೈಕ್ಲಿಂಗ್, ಪುನಹ ಉಪಯೋಗಿಸುವ, ಬಟ್ಟೆ ನಿರ್ಮಾಣದ ವಸ್ತುಗಳಿಗೆ ಆದ್ಯತೆ, ಸಾವಯವ ಕೃಷಿಗೆ ಒತ್ತು ನೀಡುವ ಕೆಲಸವಾಗಿದ್ದು, ಕಾರ್ಯಗಳಿಗೆ ಕೈಜೋಡಿಸಿದ ಪಬ್ಲಿಕ್ ನೆಕ್ಸ್ಟ್ ಮಾಧ್ಯಮದ ವರದಿಯನ್ನು ಶ್ಲಾಘಿಸಿದರು.

ಮುಲ್ಕಿ ನ.ಪಂ ಉಪಾಧ್ಯಕ್ಷ ಸತೀಶ್ ಅಂಚನ್, ಸದಸ್ಯ ಪುತ್ತುಬಾವ, ಸಿಒಡಿಪಿ ಪ್ರವರ್ತಕ ರವಿ ಕ್ರಾಸ್ತ, ಲಿಡಿಯಾ ಫುಟಾಡೋ, ಸ್ನೇಹ ಒಕ್ಕೂಟದ ಅಧ್ಯಕ್ಷ ಮೆಲ್ವಿನ್ ಡಿ ಅಲ್ಮೇಡಾ, ಮಾಜಿ ಅಧ್ಯಕ್ಷ ರಾಕಿ ಸಲ್ದಾನ ಮತ್ತಿತರರು ಉಪಸ್ಥಿತರಿದ್ದರು.

Edited By :
Kshetra Samachara

Kshetra Samachara

25/05/2022 08:06 pm

Cinque Terre

4.32 K

Cinque Terre

0

ಸಂಬಂಧಿತ ಸುದ್ದಿ