ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಾಪುರ ಏಕಮುಖ ರಸ್ತೆಯಲ್ಲಿ ಸಂಚಾರಕ್ಕೆ ಸಂಕಷ್ಟ!

ಕುಂದಾಪುರ: ಇಲ್ಲಿನ ಶಾಸ್ತ್ರೀ ಸರ್ಕಲ್‌ನಿಂದ ಬಸ್ರೂರ್ ಮೂರುಕೈವರೆಗೆ ಏಕಮುಖ ಸಂಚಾರ ರಸ್ತೆಗಳಿದ್ದು, ಇಲ್ಲಿನ ಸಾರ್ವಜನಿಕರು ಅಗತ್ಯ ಸೇವೆಗಳಿರುವ ಆಸ್ಪತ್ರೆ ಹಾಗೂ ಇನ್ನಿತರ ಕೆಲಸಗಳಿಗೆ ಹೋಗಬೇಕೆಂದರೆ ಪ್ರದಕ್ಷಿಣೆ ಹಾಕಬೇಕಾದ ಪರಿಸ್ಥಿತಿ ಒದಗಿದೆ. ಹಾಗೇ ಕೆಲ ಸಾರ್ವಜನಿಕರು ಏಕಮುಖ ಸಂಚಾರದ ನಿಯಮ ಉಲ್ಲಂಘನೆ ಮಾಡಿ ಸಂಚಾರ ನೆಡೆಸುತ್ತಿರುವುದು ಅನೇಕ ಅಪಘಾತಗಳಿಗೂ ದಾರಿ ಮಾಡಿ ಕೊಟ್ಟಿದೆ.

ಜಿಲ್ಲಾಧಿಕಾರಿ ಅನುಮೋದನೆ ನೀಡಿ ಗೆಜೆಟ್ ನೋಟಿಸ್ ಬಂದರೆ ಈ ಸಮಸ್ಯೆಗೆ ಪರಿಹಾರ ಸಿಕ್ಕಿ ವಾಹನ ದಟ್ಟನೆ ಅಪಘಾತಗಳು ಕಡಿಮೆಯಾಗುತ್ತದೆ. ಹಾಗಾಗಿ ಆದಷ್ಟು ಬೇಗನೆ ಈ ಸಮಸ್ಯೆಗೆ ಪರಿಹಾರ ನೀಡಬೇಕಿದೆ ಎನ್ನುವುದು ಇಲ್ಲಿನ ಸ್ಥಳೀಯರ ಆಗ್ರಹವಾಗಿದೆ.

Edited By : Nagesh Gaonkar
Kshetra Samachara

Kshetra Samachara

23/04/2022 09:37 pm

Cinque Terre

8.19 K

Cinque Terre

1

ಸಂಬಂಧಿತ ಸುದ್ದಿ