ಬಜಪೆ: ಮೂಡಬಿದಿರೆ - ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಕೈಕಂಬದಿಂದ ಒಳರಸ್ತೆ(ಬಂಗ್ಲೆಗುಡ್ಡೆ)ಯ ಮೂಲಕ ಗುರುಪುರಕ್ಕೆ ಸಾಗುವಂತಹ ರಸ್ತೆಯ ಅಂಚಿನ ಉದ್ದಕ್ಕೂ ಕಸದ ರಾಶಿ ತುಂಬಿ ಹೋಗಿದ್ದು, ರಸ್ತೆಯಲ್ಲಿ ಸಾಗುವಂತಹ ವಾಹನ ಸವಾರರು ಹಾಗೂ ಸಾರ್ವಜನಿಕರು ಮೂಗು ಮುಚ್ಚಿಕೊಂಡೆ ಹೋಗಬೇಕಾದ ಪರಿಸ್ಥಿತಿ ಎದುರಾಗಿದೆ .
ಈ ರಸ್ತೆಯು ಗುರುಪುರಕ್ಕೆ ಸಾಗಲು ತೀರ ಹತ್ತಿರದ ರಸ್ತೆಯಾಗಿದ್ದು,ಹೆಚ್ಚಿನ ವಾಹನಗಳು ಈ ರಸ್ತೆಯ ಮುಖೇನವೇ ಗುರುಪುರಕ್ಕೆ ಸಾಗುತ್ತಿದೆ. ಅಲ್ಲದೆ ಸಾರ್ವಜನಿಕರಿಗೂ ಬಹಳಷ್ಟು ಉಪಯುಕ್ತ ರಸ್ತೆ ಇದಾಗಿದೆ.ರಾಷ್ಟ್ರೀಯ ಹೆದ್ದಾರಿಯಲ್ಲಿನ ವಾಹನಗಳ ದಟ್ಟಣೆ ಜಾಸ್ತಿಯಾಗಿರುದರಿಂದ ಹೆಚ್ಚಿನ ವಾಹನಗಳು ಈ ಒಳ ರಸ್ತೆಯ ಮೂಲಕವೇ ಗುರುಪುರ ಕಡೆಗೆ ಸಂಚರಿಸುತ್ತದೆ.
ಕಳೆದ ಕೆಲವು ತಿಂಗಳುಗಳಿಂದ ರಸ್ತೆಯ ಅಂಚಿನಲ್ಲಿ ಕಸದ ರಾಶಿಯು ಹೆಚ್ಚಾಗುತ್ತಲೇ ಹೋಗುತ್ತಿದೆ. ಈ ಬಗ್ಗೆ ಸಂಬಂಧಪಟ್ಟ ಗ್ರಾಮ ಪಂಚಾಯತ್ ದುರ್ವಾಸನೆ ಬೀರುತ್ತಿರುವ ಕಸವನ್ನು ತೆರವುಗೊಳಿಸಬೇಕಾಗಿದೆ ಅಲ್ಲದೆ ರಸ್ತೆಯ ಅಂಚಿನಲ್ಲಿ ಯಾರೇ ಕಸ ಎಸೆದರು ಅವರ ವಿರುದ್ಧ ಕ್ರಮವನ್ನು ಜರುಗಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
Kshetra Samachara
24/02/2022 02:09 pm