ಮುಲ್ಕಿ:ಹಳೆಯಂಗಡಿ ಹಾಗೂ ಪಕ್ಷಿಕೆರೆ ಕಿನ್ನಿಗೋಳಿ ಕಟೀಲು ನಡುವಿನ ಪ್ರಧಾನ ಸಂಪರ್ಕ ರಸ್ತೆಯ ಇಂದಿರಾನಗರದ ರೈಲ್ವೇ ಕ್ರಾಸಿಂಗನ್ನು ಕೊಂಕಣ ರೈಲ್ವೆ ಕಾರ್ಪೊರೇಷನ್ ಅಮಿಟೆಡ್ ಸಂಸ್ಥೆಯು ರೈಲ್ವೇ ಹಳಿ ಹಾಗೂ ಹಳಿಯ ಕೆಳಗೆ ಅಳವಡಿಸುವ ಸಿಮೆಂಟ್‌ನ ಪಟ್ಟಿಯನ್ನು ಹೊಸದಾಗಿ ಅಳವಡಿಸುವ ಕಾಮಗಾರಿಯು ನಡೆಯಲಿರುವುದರಿಂದ ಜ. 21 ಹಾಗೂ 22 ರಂದು ಎರಡು ದಿನ ಬಂದ್ ಮಾಡಿದ್ದು ಶನಿವಾರ 5 ಗಂಟೆಗೆ ವಾಹನ ಸಂಚಾರ ಮುಕ್ತ ಎಂದು ಪ್ರಕಟಣೆ ಹೊರಡಿಸಿದ್ದರೂ ಇನ್ನೂ ಕಾಮಗಾರಿ ನಡೆಯುತ್ತಿರುವ ಬಗ್ಗೆ ವಾಹನ ಸವಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಿಧಾನಗತಿಯ ಕಾಮಗಾರಿಯಿಂದ ಪ್ರಯಾಣಿಕರು ಹಾಗೂ ವಾಹನ ಸವಾರರು ಸಂಕಷ್ಟಕ್ಕೀಡಾಗಿದ್ದು
ಇಂದ್ರ ನಗರ ಪರಿಸರದ ವಯೋವೃದ್ಧರು, ಮಹಿಳೆಯರು,ಮಕ್ಕಳು ರಾಷ್ಟ್ರೀಯ ಹೆದ್ದಾರಿ ಹಳೆಯಂಗಡಿ ಜಂಕ್ಷನ್ ಕಿಮೀ ಗಟ್ಟಲೆ ತ್ರಾಸದಾಯಕವಾಗಿ ನಡೆದುಕೊಂಡು ರೈಲ್ವೆ ಹಳಿ22 ದಾಟುತ್ತಿರುವ ದೃಶ್ಯ ಕಾಣುತ್ತಿದೆ.
ಕೊಂಕಣ ರೈಲ್ವೆ ರೈಲ್ವೆ ಅಧಿಕಾರಿಗಳ ಮೂಲಗಳ ಪ್ರಕಾರ ರಸ್ತೆಯನ್ನು ಬಂದ್ ಮಾಡಿ ಕಾಮಗಾರಿ ವೇಗದಿಂದ ನಡೆಯುತ್ತಿದ್ದರೂ ಆಗಾಗ್ಗೆ ಬರುತ್ತಿರುವ ರೈಲು ಸಂಚಾರದಿಂದ ಕಾಮಗಾರಿ ನಿಧಾನಗತಿಯಿಂದ ನಡೆಯುತ್ತಿದೆ, ಶನಿವಾರ ರಾತ್ರಿ 10 ಗಂಟೆಯವರೆಗೆ ಕೆಲಸ ಮುಂದುವರಿಯಲಿದ್ದು ಬಳಿಕ ರಸ್ತೆ ಸಂಚಾರ ಮುಕ್ತ ಗೊಳ್ಳುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ
Kshetra Samachara
23/01/2022 07:55 am