ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ವರ್ಷದಿಂದ ನಿಂತಿದ್ದ ರಸ್ತೆ ಕಾಮಗಾರಿ ಪ್ರಾರಂಭ!

ವರದಿ: ರಹೀಂ ಉಜಿರೆ

ಇದು ಪಬ್ಲಿಕ್ ನೆಕ್ಸ್ಟ್ ಇಂಪ್ಯಾಕ್ಟ್ :

ಉಡುಪಿ: "ಧೂಳುಮಯ ಬೆಳ್ಮಣ್- ಶಿರ್ವ ರಸ್ತೆಗೆ ಬೇಕಿದೆ ಕಾಯಕಲ್ಪ" ಎಂಬ ಶೀರ್ಷಿಕೆಯಡಿ ಪಬ್ಲಿಕ್ ನೆಕ್ಸ್ಟ್ ಎರಡು ದಿನಗಳ ಹಿಂದೆ ವರದಿಯೊಂದನ್ನು ಪ್ರಕಟಿಸಿತ್ತು.ವರದಿಯ ಫಲಶೃತಿ ಎಂಬಂತೆ ಎರಡೇ ದಿನದೊಳಗೆ ಈ ರಸ್ತೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ.

ಶಿರ್ವ ಬೆಳ್ಮಣ್ ರಸ್ತೆ ಕಾಮಗಾರಿ ಅರ್ಧಕ್ಕೇ ನಿಂತು ಹೆಚ್ಚು ಕಡಿಮೆ ವರ್ಷವಾಗುತ್ತಾ ಬಂದಿತ್ತು. ಜಂತ್ರ ಪರಿಸರದ ಈ ಧೂಳು ತುಂಬಿದ ರಸ್ತೆಯಲ್ಲಿ ಹಿಡಿಶಾಪ ಹಾಕುತ್ತಲೇ ಜನರು ಅತ್ತಿಂದಿತ್ತ ಸಂಚರಿಸುತ್ತಿದ್ದರು.ಮುಖ್ಯವಾಗಿ ಬಿಸಿಲಲ್ಲಿ ಧೂಳು ತುಂಬಿದ ಈ ರಸ್ತೆಯಲ್ಲಿ ಸಂಚರಿಸಲು ಸಾಧ್ಯವೇ ಇರಲಿಲ್ಲ.ವಾಹನ ಸವಾರರ ಸಮಸ್ಯೆ ಒಂದೆಡೆಯಾದರೆ ರಸ್ತೆ ಮೂಲಕ ನಡೆದುಕೊಂಡು ಹೋಗುವವರು ಮೂಗು ಬಾಯಿ ಮುಚ್ಚಿಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿತ್ರು.ಇದೀಗ ಪಬ್ಲಿಕ್ ನೆಕ್ಸ್ಟ್ ವರದಿ ಪ್ರಕಟಿಸಿದ ಬಳಿಕ ರಸ್ತೆಗೆ ಡಾಮರು ಹಾಕುವ ಕಾರ್ಯ ಭರದಿಂದ ನಡೆದಿದೆ.ರಸ್ತೆಗೆ ಜಲ್ಲಿಕಲ್ಲು ಸಹಿತ ನಿರ್ಮಾಣಕ್ಕೆ ಬೇಕಾದ ಸಾಮಾನುಗಳನ್ನು ತಂದು ಕಾಮಗಾರಿಯನ್ನು ಪುನರಾರಂಭಗೊಳಿಸಲಾಗಿದೆ.

Edited By : Nagesh Gaonkar
Kshetra Samachara

Kshetra Samachara

18/12/2021 04:50 pm

Cinque Terre

13.69 K

Cinque Terre

2

ಸಂಬಂಧಿತ ಸುದ್ದಿ