ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಧೂಳುಮಯ ಬೆಳ್ಮಣ್- ಶಿರ್ವ ರಸ್ತೆಗೆ ಬೇಕಿದೆ ಕಾಯಕಲ್ಪ

ಶಿರ್ವ: ಜಿಲ್ಲೆಯ ಶಿರ್ವ ಬೆಳ್ಮಣ್ ರಸ್ತೆ ಕಾಮಗಾಗಿ ಅರ್ಧಕ್ಕೇ ನಿಂತಿದ್ದು ಸ್ಥಳೀಯರಿಗೆ ಸಮಸ್ಯೆಯಾಗುತ್ತಿದೆ. ಶಿರ್ವ ಮಾರ್ಗವಾಗಿ ಬೆಳ್ಮಣ್ ಸಂಪರ್ಕಿಸುವ ಜಂತ್ರ ಪರಿಸರದ ಈ ರಸ್ತೆ ಕಾಮಗಾರಿ ಕೈಗೆತ್ತಿಕೊಂಡು ವರ್ಷ ಸಮೀಸುತ್ತಿದೆ.ಬಳಿಕ ಮಳೆಗಾಲ ಎಂಬ ಕಾರಣಕ್ಕೆ ಕಾಮಗಾರಿ ನಿಲ್ಲಿಸಲಾಯಿತು.ಇದೀಗ ಅರ್ಧದಲ್ಲೇ ಕಾಮಗಾರಿ ಸ್ಥಗಿತಗೊಂಡ ಈ ಧೂಳು ತುಂಬಿದ ರಸ್ತೆಯಲ್ಲೇ ಜನ ಅತ್ತಿಂದಿತ್ತ ಸಂಚರಿಸಬೇಕಾಗಿದೆ.

ಮುಖ್ಯವಾಗಿ ಬಿಸಿಲಲ್ಲಿ ಧೂಳು ತುಂಬಿದ ಈ ರಸ್ತೆಯಲ್ಲಿ ಸಂಚರಿಸಲು ಸಾಧ್ಯವೇ ಇಲ್ಲ.ವಾಹನ ಸವಾರರ ಸಮಸ್ಯೆ ಒಂದೆಡೆಯಾದರೆ ರಸ್ತೆ ಮೂಲಕ ನಡೆದುಕೊಂಡು ಹೋಗುವವರು ಮೂಗು ಬಾಯಿ ಮುಚ್ಚಿಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.ಸಂಬಂಧಪಟ್ಟ ಗುತ್ತಿಗೆದಾರರೂ ಇತ್ತ ಕಡೆ ಸುಳಿಯುತ್ತಿಲ್ಲ. ಆದಷ್ಟು ಬೇಗ ಈ ರಸ್ತೆ ಕಾಮಗಾರಿ ಪೂರ್ಣಗೊಳಿಸಿ ಸಂಚಾರಕ್ಕೆ ಯೋಗ್ಯ ಮಾಡಿ ಕೊಡುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

Edited By : Manjunath H D
Kshetra Samachara

Kshetra Samachara

16/12/2021 01:50 pm

Cinque Terre

8.05 K

Cinque Terre

0

ಸಂಬಂಧಿತ ಸುದ್ದಿ