ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಕೇರಳದಿಂದ ದ.ಕ. ಜಿಲ್ಲೆ ನಡುವಿನ ಬಸ್ ಸಂಚಾರ ನಿಷೇಧ ತೆರವು

ಮಂಗಳೂರು: ಕೇರಳದಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಬಸ್ ಸಂಚಾರ ನಿಷೇಧ ಆದೇಶವನ್ನು ತೆರವು ಮಾಡಿ ದ.ಕ. ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ.

ಆರೋಗ್ಯ, ಶಿಕ್ಷಣ, ನೌಕರಿ ಹಾಗೂ ವ್ಯಾಪಾರ ವಹಿವಾಟು ಚಟುವಟಿಕೆ ಹಿನ್ನೆಲೆಯಲ್ಲಿ ದಿನಂಪ್ರತಿ ಸಾವಿರಾರು ಮಂದಿ ಕೇರಳ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ನಡುವೆ ಬಸ್ ಸಂಚಾರವನ್ನು ಅವಲಂಬಿಸಿದ್ದರು. ಆದರೆ, ಈ ಹಿಂದೆ ಕೇರಳದಲ್ಲಿ ಕೊರೊನಾ ಹೆಚ್ಚಳವಾಗಿದ್ದ ಹಿನ್ನೆಲೆ ಬಸ್ ಸಂಚಾರಕ್ಕೆ ನಿರ್ಬಂಧ ವಿಧಿಸಿ ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಆದೇಶಿಸಿದ್ದರು.

ಆದರೆ, ಇದೀಗ ಕೊರೊನಾ ಪ್ರಕರಣ ಇಳಿಮುಖವಾಗಿದ್ದರೂ ಬಸ್ ಸಂಚಾರ ಆರಂಭವಾಗಿರಲಿಲ್ಲ. ಹೀಗಾಗಿ, ಪ್ರಯಾಣಿಕರು ಗಡಿ ಭಾಗ ತಲಪಾಡಿಯವರೆಗೆ ಕೇರಳ ರಾಜ್ಯದ ಬಸ್​ನಲ್ಲಿ ಬಂದು ಅಲ್ಲಿಂದ ಕರ್ನಾಟಕದ ಬಸ್​ನಲ್ಲಿ ಮಂಗಳೂರಿಗೆ ಬರುತ್ತಿದ್ದರು. ಇದರಿಂದ ಸಾರ್ವಜನಿಕರು ಸಮಸ್ಯೆಗೆ ಸಿಲುಕಿದ್ದರು.

ಹೀಗಾಗಿ, ಈ ಹಿಂದೆ ವಿಧಿಸಲಾಗಿದ್ದ ನಿರ್ಬಂಧವನ್ನು ಷರತ್ತುಬದ್ಧ ಆದೇಶದೊಂದಿಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ತೆರವುಗೊಳಿಸಿ ಆದೇಶಿಸಿದ್ದಾರೆ. ಪ್ರಯಾಣಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಕೇರಳದಿಂದ ರಾಜ್ಯಕ್ಕೆ ಪ್ರಯಾಣಿಸುವವರು 72 ಗಂಟೆಗಳ ಒಳಗೆ ಮಾಡಿಸಿರುವ ಹಾಗೇ ದಿನಂಪ್ರತಿ ಮಂಗಳೂರಿಗೆ ಬರುವವರು 7 ದಿನಗಳ ಒಳಗಿನ ಆರ್​ಟಿಪಿಸಿಆರ್​ ನೆಗೆಟಿವ್ ವರದಿ ಹೊಂದಿರಬೇಕು. ಜೊತೆಗೆ ಎರಡು ಡೋಸ್ ಲಸಿಕೆ ‌ಪಡೆದಿರಬೇಕು ಎಂದು ತಿಳಿಸಿದ್ದಾರೆ.

Edited By : Nagaraj Tulugeri
Kshetra Samachara

Kshetra Samachara

19/11/2021 10:42 pm

Cinque Terre

9.59 K

Cinque Terre

0

ಸಂಬಂಧಿತ ಸುದ್ದಿ