ಕಾಪು : ಎಲ್ಲೆಡೆ ದೀಪಾವಳಿಯ ಸಂಭ್ರಮ ಮನೆ ಮಾಡಿದ್ದು ಕಾಪು ಪೇಟೆಯಲ್ಲಿ ಗುರುವಾರ ಹೂವು, ಪಟಾಕಿ ಸಹಿತ ಹಬ್ಬಕ್ಕಾಗಿ ಸಾಮಾಗ್ರಿಗಳ ಖರೀದಿ ಜೋರಾಗಿ ನಡೆದಿದೆ.
ದೀಪಾವಳಿ ಹಬ್ಬಕ್ಕೆ ಮೊದಲೇ ಹೂವು, ತರಕಾರಿ, ಪಟಾಕಿಯ ದರದಲ್ಲಿ ಏರಿಕೆ ಕಂಡು ಬಂದಿದ್ದರೂ ಗ್ರಾಹಕರು ದಿನವಿಡೀ ಪೇಟೆಗೆ ಬಂದು ತಮಗೆ ಬೇಕಾದ ವಸ್ತುಗಳನ್ನು ಖರೀದಿಸಿ, ಹಬ್ಬಕ್ಕೆ ಸಂಭ್ರಮಕ್ಕೆ ಭರ್ಜರಿ ಸಿದ್ಧತೆ ನಡೆಸಿದ್ದಾರೆ.
ಕಾಪು ಪೇಟೆಯಲ್ಲಿ ಘಟ್ಟದ ಮೇಲಿನ ಹೂವು ವ್ಯಾಪಾರಿಗಳು ಮತ್ತು ರೈತರು ಬಂದು ಹೂವು ಮಾರಾಟ ಮಾಡಿದ್ದರಿಂದ ಸ್ಥಳೀಯ ವ್ಯಾಪಾರಿಗಳಿಗೆ ನಷ್ಟವುಂಟಾಗಿದ್ದು , ಬೇಡಿಕೆಯಷ್ಟು ಹಸುರು ಪಟಾಕಿ ಸಿಗದೇ ಪಟಾಕಿ ವ್ಯಾಪಾರಸ್ಥರು ತೊಂದರೆ ಎದುರಿಸುವಂತಾಯಿತು.
Kshetra Samachara
04/11/2021 10:19 pm