ಬಜಪೆ:ದುರ್ಗಾ ಕಲ್ಚರಲ್ ಅ್ಯಂಡ್ ಕ್ರಿಕೆಟ್ ಕ್ಲಬ್ ಎಕ್ಕಾರು ವತಿಯಿಂದ ನವೀಕರಿಸಲಾದ ಬಸ್ ಸ್ಟ್ಯಾಂಡ್ ಹಾಗೂ ಪುಸ್ತಕ ಗೂಡಿನ ಉದ್ಘಾಟನೆಯನ್ನು ಎಕ್ಕಾರು ಶ್ರೀ ಕೊಡಮಣಿತ್ತಾಯ ದೇವಸ್ಥಾನದ ಆಡಳಿತ ಮೊಕ್ತೇಸರ ಶ್ರೀನಿತನ್ ಹೆಗ್ಡೆ ಕಾವರಮನೆ (ತಿಮ್ಮ ಕಾವ)ನೆರವೇರಿಸಿದರು.
ದ.ಕ ಜಿಲ್ಲಾ ಪಂಚಾಯತ್ ಸಿಇಒ ಡಾ.ಕುಮಾರ್ ಅವರ ಪರಿಕಲ್ಪನೆಯ ಪುಸ್ತಕ ಗೂಡು ವ್ಯವಸ್ಥೆಯನ್ನು ಜಿ.ಪಂ ಮಾಜಿ ಸದಸ್ಯ ಈಶ್ವರ್ ಕಟೀಲ್ ಉದ್ಘಾಟಿಸಿದರು.ಹಾಗೂ ಹಿಂದೂ ಯುವಸೇನೆ ದುರ್ಗಾ ಶಕ್ತಿ ಶಾಖೆ ಎಕ್ಕಾರು ವತಿಯಿಂದ ನವೀಕರಿಸಲಾದ ಬಸ್ ಸ್ಟ್ಯಾಂಡ್ ನ್ನು ದ.ಕ ಜಿ.ಪಂ ಮಾಜಿ ಉಪಾಧ್ಯಕ್ಷೆ ಕಸ್ತೂರಿ ಪಂಜ ಅವರು ಉದ್ಘಾಟಿಸಿದರು.
ಎಕ್ಕಾರು ಗ್ರಾ.ಪಂ ಅಧ್ಯಕ್ಷೆ ಸುರೇಖಾ ರೈ ಅವರು ಪುಸ್ತಕ ಗೂಡು ಉದ್ಘಾಟಿಸಿದರು.ಈ ಸಂದರ್ಭ ಎಕ್ಕಾರು ಗ್ರಾ.ಪಂ ಅಧ್ಯಕ್ಷೆ ಸುರೇಖಾ ರೈ,ಮನಪಾ ನಾಮ ನಿರ್ದೇಶಿತ ಸದಸ್ಯ ಭಾಸ್ಕರ ಚಂದ್ರ ಶೆಟ್ಟಿ,ಹಿಂದೂ ಯುವ ಸೇನೆ ಕೇಂದ್ರೀಯ ಸಮಿತಿಯ ಯಶೋಧರ ಶೆಟ್ಟಿ,ಎಕ್ಕಾರು ದುರ್ಗಾಶಕ್ತಿ ಶಾಖೆಯ ಅಧ್ಯಕ್ಷ ಪ್ರವೀಣ್ ಆಚಾರ್ಯ,ದುರ್ಗಾ ಕಲ್ಚರಲ್ ಅ್ಯಂಡ್ ಕ್ರಿಕೆಟ್ ಕ್ಲಬ್ ನ ಅಧ್ಯಕ್ಷ ದೀಪಕ್ ಪೂಜಾರಿ,ಎಕ್ಕಾರು ಗ್ರಾ.ಪಂ ಸದಸ್ಯ ಸುದೀಪ್ ಅರ್ ಅಮೀನ್,ಪ್ರಕಾಶ್ ಕುಕ್ಯಾನ್ ,ಸುರೇಶ್ ಶೆಟ್ಟಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
26/10/2021 11:25 am