ಬ್ರಹ್ಮಾವರ: ಕಾವೂರಿನ ಸುಮೇಧ ಫೌಂಡೇಶನ್ ನ ಯುವಕರು ಸ್ಥಾಪಿಸಿರುವ ಪೇಜಾವರ ಗೋಶಾಲೆಗೆ ಯುವ ಉದ್ಯಮಿ
ದಿಲೇಶ್ ಶೆಟ್ಟಿ ಬೆಳ್ಳಂಪಳ್ಳಿ ಟಾಟ ಏಸ್ ವಾಹನವನ್ನು ಕೊಡುಗೆಯಾಗಿ ನೀಡಿದ್ದಾರೆ. ಕಾವೂರು ಶ್ರೀಮಹಾಲಿಂಗೇಶ್ವರ ದೇವಳದ ವಠಾರದಲ್ಲಿ ಅರ್ಚಕರು ವಾಹನ ಪೂಜೆ ನೆರವೇರಿಸಿದ ಬಳಿಕ ಪೇಜಾವರ ಗೋಶಾಲೆಯ ಸದಸ್ಯರಿಗೆ ವಾಹನದ ಕೀಲಿಕೈಯನ್ನು ದಿಲೇಶ್ ಶೆಟ್ಟಿ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಸುಮೇಧ ಫೌಂಡೇಶನ್ ನ ಟ್ರಷ್ಠಿಗಳಾದ ರಕ್ಷಿತ್ ಎ ಕುಮಾರ್, ಮನೋಜಿತ್ ಕೆ.ವಿ , ರಣದೀಪ್ ಕಾಂಚನ್ ಹಾಗೂ ಪ್ರಸಾದ್ ಹೆಗ್ಡೆ, ಸಂದೀಪ್ ನಾಯಕ್, ಅನುದೀಪ್, ಶಿವಪ್ರಸಾದ್, ಹರೀಶ್ ಕುಲಾಲ್ ಉಪಸ್ಥಿತರಿದ್ದರು.
Kshetra Samachara
25/10/2021 02:46 pm