ಪುತ್ತೂರು: ಸಂಬಳ ನೀಡದ ಕೆ.ಎಸ್.ಆರ್.ಟಿ.ಸಿ. ಕೇಂದ್ರ ಕಚೇರಿ ವಿರುದ್ಧ ಪುತ್ತೂರು ಬಿಎಮ್ಎಸ್ ನೇತೃತ್ವದಲ್ಲಿ ಆಮರಣಾಂತ ಉಪವಾಸ ಸತ್ಯಾಗ್ರಹ ಆರಂಭಗೊಂಡಿದೆ.
ಕಳೆದ ಎರಡು ತಿಂಗಳಿನಿಂದ ಸಂಬಳ ನೀಡದೆ ಸತಾಯಿಸುತ್ತಿರುವ ಕೇಂದ್ರ ಕಚೇರಿ ಅಧಿಕಾರಿಗಳು, ಬಡ ಕಾರ್ಮಿಕರನ್ನು ಆತ್ಮಹತ್ಯೆ ಮಾಡಿಕೊಳ್ಳಲು ಪ್ರಚೋದಿಸುತ್ತಿದ್ದಾರೆ ಎಂದು ಬಿಎಮ್ಎಸ್ ಮುಖಂಡರು ಆರೋಪಿಸಿದ್ದಾರೆ.
ಪುತ್ತೂರಿನ 'ಅಮರ್ ಜವಾನ್' ಸ್ಮಾರಕದ ಬಳಿ ಉಪವಾಸ ಸತ್ಯಾಗ್ರಹ ಆರಂಭಿಸಿರುವ ಪುತ್ತೂರು ಘಟಕದ ಸಿಬ್ಬಂದಿ, ತಮ್ಮ ಬೇಡಿಕೆ ಈಡೇರುವವರೆಗೆ ಸತ್ಯಾಗ್ರಹ ಮುಂದುವರಿಸಲು ತೀರ್ಮಾನಿಸಿದ್ದಾರೆ.
ಕೆ.ಎಸ್.ಆರ್.ಟಿ.ಸಿ. ನಾಲ್ಕು ಘಟಕಗಳ ಪೈಕಿ ಮೂರು ಘಟಕಗಳ ಸಿಬ್ಬಂದಿಗೆ ಅರ್ಧ ಸಂಬಳ ಸೇರಿದಂತೆ ಎಲ್ಲ ಗ್ರಾಜ್ಯುಟಿಗಳನ್ನು ನೀಡಲಾಗಿದೆ. ಆದರೆ, ತಮ್ಮ ಘಟಕದ ಅಧಿಕಾರಿಗಳು ಮಾತ್ರ ಸರಕಾರವು ನೌಕರರಿಗೆ ನೀಡಿದ ಸಂಬಳವನ್ನೂ ನೀಡದೆ ಸತಾಯಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
Kshetra Samachara
25/10/2021 12:49 pm