ಮುಲ್ಕಿ: ಶಿಮಂತೂರು ಯುವಕ ಮಂಡಲ (ರಿ.) ಮತ್ತು ರಾಮಸೇನಾ ಕರ್ನಾಟಕ (ರಿ.)ಪರಶುರಾಮ ಘಟಕ ಸಹಯೋಗದೊಂದಿಗೆ, "ಅರೋಗ್ಯ ಕರ್ನಾಟಕ ಆಯುಷ್ಮಾನ್ ಭಾರತ" ಉಚಿತ ಗುರುತಿನ ಚೀಟಿ ವಿತರಣಾ ಸಮಾರಂಭ ಶಿಮಂತೂರು ಶ್ರೀ ಜನಾರ್ದನ ದೇವಸ್ಥಾನ ವಠಾರದಲ್ಲಿ ಭಾನುವಾರ ನಡೆಯಿತು.
ಕಾರ್ಯಕ್ರಮಕ್ಕೆ ದೇವಸ್ಥಾನದ ಪ್ರಧಾನ ಅರ್ಚಕ ಪುರುಷೋತ್ತಮ ಭಟ್ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿ ಮಾತನಾಡಿ "ಆರೋಗ್ಯವೇ ಭಾಗ್ಯ ಎಂಬ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶದಲ್ಲಿ ಯುವ ಸಂಘಟನೆಗಳು ಹಮ್ಮಿಕೊಂಡಿರುವ ಕಾರ್ಯಕ್ರಮ ಯಶಸ್ವಿಯಾಗಲಿ" ಎಂದು ಶುಭ ಹಾರೈಸಿದರು.
ಕಿನ್ನಿಗೋಳಿ ಡಿಜಿಟಲ್ ಸೇವಾ ಕೇಂದ್ರದ ಮುಖ್ಯಸ್ಥ ಅಶೋಕ್ "ಅರೋಗ್ಯ ಕರ್ನಾಟಕ ಆಯುಷ್ಮಾನ್ ಭಾರತ" ಉಚಿತ ಗುರುತಿನ ಚೀಟಿ ಬಗ್ಗೆ ಮಾಹಿತಿ ನೀಡಿದರು.ಶಿಮಂತೂರು ದೇವಸ್ಥಾನದ ಆಡಳಿತ ಮೊಕ್ತೇಸರ ಚಂದ್ರಹಾಸ ಶೆಟ್ಟಿಯವರು ಸಂಘಟನೆಗಳ ಕಾರ್ಯಕ್ರಮಗಳ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿ ಶುಭಹಾರೈಸಿದರು.
ವೇದಿಕೆಯಲ್ಲಿ ಮುಖ್ಯಅತಿಥಿಗಳಾಗಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯರುಗಳಾದ ಹರೀಶ್ ಶೆಟ್ಟಿ, ದಿನೇಶ್ಚಂದ್ರ ಅಜಿಲ,ಯುವಕ ಮಂಡಲದ ಅಧ್ಯಕ್ಷ ಕಿಶೋರ್ ಶೆಟ್ಟಿ,ರಾಮಸೇನಾ ಕರ್ನಾಟಕ (ರಿ.) ಅಧ್ಯಕ್ಷ ದೀಪಕ್ ಕುಲಾಲ್, ಸುಧೀರ್ ಶೆಟ್ಟಿ ಶಿಮಂತೂರು ಮತ್ತಿತರರು ಉಪಸ್ಥಿತರಿದ್ದರು. ಗೋಪಾಲ್ ಶಿಮಂತೂರು ಕಾರ್ಯಕ್ರಮ ನಿರೂಪಿಸಿದರು.
Kshetra Samachara
17/10/2021 10:54 am