ಬಂಟ್ವಾಳ: ಹಿಂದೂ ಜಾಗರಣ ವೇದಿಕೆ ವಿಟ್ಲ ತಾಲೂಕು ಇದರ ಆಶ್ರಯದಲ್ಲಿ ನಮ್ಮ ನಡಿಗೆ ನರಹರಿಯ ಕಡೆಗೆ ಎಂಬ ಶೀರ್ಷಿಕೆಯೊಂದಿಗೆ ಪಾದಯಾತ್ರೆ ಮತ್ತು ಜನಜಾಗೃತಿ ಸಾರ್ವಜನಿಕ ಸಭೆಯು ಅ.17 ರಂದು ಬೆಳಗ್ಗೆ ನಡೆಯಲಿದೆ. ಬೆಳಗ್ಗೆ ಸುಮಾರು 7.30ಕ್ಕೆ ಕಲ್ಲಡ್ಕ ಶ್ರೀರಾಮ ಮಂದಿರದ ಬಳಿಯಿಂದ ಮತ್ತು ಮೆಲ್ಕಾರ್ ಜಂಕ್ಷನ್ ನಿಂದ ಪಾದಯಾತ್ರೆ ನಡೆಯಲಿದ್ದು. ಈ ಪಾದಯಾತ್ರೆ ನರಹರಿ ಪರ್ವತದ ದೇವಸ್ಥಾನದ ಬಳಿ ಸಮಾಪನಗೊಂಡ ಬಳಿಕ ಸಭಾ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮದಲ್ಲಿ ಹಿಂದೂ ಜಾಗರಣ ವೇದಿಕೆ ರಾಜ್ಯಾಧ್ಯಕ್ಷರಾದ ಬಿ. ಎಸ್. ಪೈ, ಹಿಂದೂ ಜಾಗರಣ ವೇದಿಕೆ ಪ್ರಾಂತ ಕಾರ್ಯಕಾರಿಣಿ ಸದಸ್ಯ ರಾಧಾಕೃಷ್ಣ ಅಡ್ಯಂತಾಯ, ಭಾಗವಹಿಸಲಿದ್ದಾರೆ. ದಿಕ್ಸೂಚಿ ಭಾಷಣವನ್ನು ಬಾಲ ವಾಗ್ಮಿ ಹಾರಿಕಾ ಮಂಜುನಾಥ್ ರವರು ನಡೆಸಲಿದ್ದಾರೆ ಎಂದು ಹಿಂ.ಜಾ.ವೇ. ಪ್ರಕಟಣೆಯಲ್ಲಿ ತಿಳಿಸಿದೆ.
Kshetra Samachara
16/10/2021 04:47 pm