ಕಾಪು: ಉದ್ಯಾವರ ಗ್ರಾ.ಪಂ. ವ್ಯಾಪ್ತಿಯಲ್ಲಿ ನೂತನವಾಗಿ 6.5 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಜಾರುಕುದ್ರು ಸೇತುವೆಯ ಉದ್ಘಾಟನೆ ಶೀಘ್ರದಲ್ಲಿಯೇ ನಡೆಯಲಿದೆ ಎಂದು ಕಾಪು ಶಾಸಕ ಲಾಲಾಜಿ ಆರ್. ಮೆಂಡನ್ ಹೇಳಿದರು.
ಸೇತುವೆಯ ಕಾಮಗಾರಿಯನ್ನು ವೀಕ್ಷಿಸಿ, ಬಳಿಕ ಮಾತನಾಡಿದ ಶಾಸಕರು, ಸರಕಾರದ ದೂರದೃಷ್ಟಿತ್ವದ ಯೋಜನೆಯಾಗಿ ಈ ಭಾಗದ ಗ್ರಾಮಸ್ಥರಿಗೆ ಸುವ್ಯವಸ್ಥಿತ ಸಂಪರ್ಕಕ್ಕೆ ಈ ಸೇತುವೆಯು ನಿರ್ಮಾಣಗೊಂಡಿದ್ದು, ಎಲ್ಲರ ಸಹಕಾರದಿಂದ ಯೋಜನೆ ಸಾಕಾರಗೊಳ್ಳುತ್ತಿದೆ ಎಂದು ಹೇಳಿ, ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು ಹಾಗೂ ಅಧಿಕಾರಿಗಳು ಜನರ ಬೇಡಿಕೆಗಳ ಬಗ್ಗೆ ತುರ್ತಾಗಿ ಸ್ಪಂದಿಸುವಂತೆ ಸೂಚಿಸಿದರು.
ಉದ್ಯಾವರ ಗ್ರಾ.ಪಂ. ಅಧ್ಯಕ್ಷ ರಾಧಾಕೃಷ್ಣ ಶ್ರೀಯಾನ್, ಸದಸ್ಯರಾದ ಗಿರೀಶ್ ಸುವರ್ಣ, ರಾಜೇಶ್ ಶ್ರೀಯಾನ್, ಮಾಲತಿ ಸಂದೀಪ್, ಯೋಗೀಶ್ ಎಸ್.ಕೋಟ್ಯಾನ್, ರಾಜೇಶ್ ಕುಂದರ್ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
05/10/2021 11:55 am