ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ತ್ಯಾಜ್ಯದ ರಾಶಿ ವಿಲೇವಾರಿ. ತಕ್ಷಣ ನಗರಸಭೆ ಸ್ಪಂದನೆ. ವರದಿ ಫಲಶ್ರುತಿ

ಉಡುಪಿ: ರಾಷ್ಟ್ರೀಯ ಹೆದ್ದಾರಿ 66, ಕರಾವಳಿ ಬೈಪಾಸ್ ಬಳಿ, ಕೋಳಿ ತ್ಯಾಜ್ಯ, ಸಿಯಾಳ ಚಿಪ್ಪು, ಹಾಗೂ ಇನ್ನಿತರ ತ್ಯಾಜ್ಯಗಳನ್ನು ಎಸೆಯಲಾಗಿತ್ತು, ಪರಿಸರದಲ್ಲಿ ಗಬ್ಬು ವಾಸನೆ ಹರಡಿತ್ತು. ಪರಿಸರದ ಸೌಂದರ್ಯವು ಹಾಳಾಗಿತ್ತು. ಮಲೇರಿಯಾ, ಡೆಂಗ್ಯೂ ಕಾಯಿಲೆ ಹರಡುವ ರೋಗವಾಹಕ ಸೊಳ್ಳೆಗಳ ಉತ್ಪತ್ತಿ ಕೇಂದ್ರವಾಗಿ ಇಲ್ಲಿಯ ಸ್ಥಳವು ಮಾರ್ಪಟ್ಟಿತ್ತು. ಸಾಮಾಜಿಕಪ್ರಜ್ಞೆ ಇಲ್ಲದ ಕಿಡಿಗೇಡಿಗಳಿಂದ ಈ ಕೃತ್ಯ ನಡೆದಿತ್ತು. ತಪ್ಪಿತಸ್ಥರ ವಿರುದ್ಧ ನಗರಸಭೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು, ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಅವರು ಆಗ್ರಹಪಡಿಸಿದ್ದರು.

ಈ ಬಗ್ಗೆ ಪಬ್ಲಿಕ್ ನೆಸ್ಟ್ ಜಾಲತಾಣ ಸುದ್ದಿ ವಾಹಿನಿಯು ಸುದ್ದಿ ಬಿತ್ತರಿಸಿ, ಸಂಬಂಧಪಟ್ಟವರ ಗಮನ ಸೆಳೆದಿತ್ತು. ಇವಾಗ ವಾಹಿನಿಯ ವರದಿ ಫಲಶ್ರುತಿ ಪಡೆದಿದೆ. ನಗರಸಭೆ ಕಸ ತ್ಯಾಜ್ಯಗಳನ್ನು ವಿಲೇವಾರಿಗೊಳಿಸಿದೆ. ನಗರಸಭೆಯು ತಕ್ಷಣದ ಸ್ಪಂದನೆಗೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

Edited By : Manjunath H D
Kshetra Samachara

Kshetra Samachara

29/09/2021 01:36 pm

Cinque Terre

15.02 K

Cinque Terre

0

ಸಂಬಂಧಿತ ಸುದ್ದಿ