ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು : ಜಿಲ್ಲಾ ನ್ಯಾಯಾಲಯದೊಳಗಡೆ ಆತ್ಮಹತ್ಯೆ ಪ್ರಕರಣ: ತಡಬೇಲಿ ರಕ್ಷಣೆ

ಮಂಗಳೂರು: ಮಂಗಳೂರು ಜಿಲ್ಲಾ ನ್ಯಾಯಾಲಯ ಸಂಕೀರ್ಣದೊಳಗಡೆ ಯಾವುದೇ ಅವಘಡಗಳು ಸಂಭವಿಸದಂತೆ ಆರೂ ಮಹಡಿಗಳಿಗೂ ತಡೆಬೇಲಿಯ ರಕ್ಷಣೆ ಮಾಡಲಾಗಿದೆ.

ಇತ್ತೀಚಿಗೆ ಮಂಗಳೂರು ಜಿಲ್ಲಾ ನ್ಯಾಯಾಲಯ ಸಂಕೀರ್ಣದೊಳಗಡೆ ಪೊಕ್ಸೊ ಪ್ರಕರಣದ ಆರೋಪಿಯೋರ್ವನು ಆರನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ. ಈ ಹಿಂದೆಯೂ ಇದೇ ರೀತಿ ವಿಚಾರಣಾಧೀನ ಕೈದಿಯೋರ್ವನು ಮೇಲಿನಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ. ಈ ಹಿನ್ನೆಲೆಯಲ್ಲಿ ನ್ಯಾಯಾಲಯ ಸಂಕೀರ್ಣದ ಒಳಗಡೆ ನೈಲಾನ್ ಬಲೆಯ ತಡೆಬೇಲಿ ರಕ್ಷಣೆ ಮಾಡಲಾಗಿದೆ.

ನ್ಯಾಯಾಲಯ ಸಂಕೀರ್ಣದ ತೆರೆದ ಪ್ರದೇಶವನ್ನು ಪೂರ್ತಿ ನೈಲಾನ್ ಬಲೆಯಿಂದ ಮುಚ್ಚಲಾಗುತ್ತಿದೆ. ಈ ಮೂಲಕ‌ ನ್ಯಾಯಾಲಯದೊಳಗಡೆ ನಡೆಯುವ ಆತ್ಮಹತ್ಯೆ ಪ್ರಕರಣವನ್ನು ತಡೆಗಟ್ಟಲು ಕ್ರಮ ವಹಿಸಲಾಗಿದೆ.

Edited By : Shivu K
Kshetra Samachara

Kshetra Samachara

27/09/2021 04:37 pm

Cinque Terre

15.59 K

Cinque Terre

0

ಸಂಬಂಧಿತ ಸುದ್ದಿ