ಮುಲ್ಕಿ: ಅತಿಕಾರಿಬೆಟ್ಟು ಗ್ರಾಮಪಂಚಾಯತ್ ವ್ಯಾಪ್ತಿಯ ಮಟ್ಟು ಶಾಂಭವಿ ನದಿಯಿಂದ ಎಗ್ಗಿಲ್ಲದೆ ನಡೆಯುತ್ತಿರುವ ಮರಳುಗಾರಿಕೆಯಿಂದ ಕಕ್ವ ಸೇತುವೆ ಬಿರುಕು ಬಿಟ್ಟಿದ್ದು ಅಪಾಯಕಾರಿಯಾಗಿ ಪರಿಣಮಿಸಿದೆ ಎಂದು ಸ್ಥಳೀಯ ನಾಗರಿಕರು ದೂರಿದ್ದಾರೆ
ಮರಳುಗಾರಿಕೆಯಿಂದ ಈಗಾಗಲೇ ಅತಿಕಾರಿಬೆಟ್ಟು ಗ್ರಾಪಂ ವ್ಯಾಪ್ತಿಯ ಮಟ್ಟುವಿನಿಂದ ವಿಜಯ ಕಾಲೇಜು ಮೂಲಕ ಮುಲ್ಕಿ ಸಂಪರ್ಕರಸ್ತೆ ಸಂಪೂರ್ಣನಾಶವಾಗಿದೆ ಇದೀಗ ಕಕ್ವ ಸೇತುವೆ ಬಿರುಕು ಬಿಟ್ಟಿರುವುದು ಸ್ಥಳೀಯರ ನಾಗರಿಕರನ್ನು ಆಕ್ರೋಶಕ್ಕೀಡು ಮಾಡಿದೆ. ಕಳೆದ ಹಲವಾರು ವರ್ಷಗಳ ಹಿಂದಿನ ಕಕ್ವ ಸೇತುವೆ ಕೆಳಭಾಗದಲ್ಲಿ ಕಲ್ಲುಗಳು ಜಾರಿದ್ದು ಎಗ್ಗಿಲ್ಲದೆ ಮರಳು ಸಾಗಿಸುವ ಟಿಪ್ಪರ್ ಗಳಿಂದ ಕುಸಿವ ಭೀತಿಯನ್ನು ಎದುರಿಸುತ್ತಿದೆ.
ಇದೀಗ ತಾತ್ಕಾಲಿಕವಾಗಿ ಮರಳುಗಾರಿಕೆ ನಿಂತಿದ್ದು ಮುಂದಿನ ದಿನಗಳಲ್ಲಿ ಮರಳು ಮಾಫಿಯಾ ಗಳು ಪರವಾನಿಗೆ ನವೀಕರಿಸುವ ಮೂಲಕ ಮತ್ತಷ್ಟು ಮರಳುಗಾರಿಕೆ ನಡೆಯುವ ಸಾಧ್ಯತೆ ಇದೆ
ಸೇತುವೆ ಕುಸಿದರೆ ಮಟ್ಟು ವಿನಿಂದ ಮುಲ್ಕಿ ಸಂಪರ್ಕ ಕಡಿತಗೊಳ್ಳುವ ಸಾಧ್ಯತೆ ಇದೆ ಎಂದು ಸ್ಥಳೀಯ ನಾಗರಿಕರು ಆತಂಕಗೊಂಡು ಅತಿಕಾರಿ ಬೆಟ್ಟು ಗ್ರಾಮ ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗೆ ದೂರು ನೀಡಿದ್ದಾರೆ.
ಸೇತುವೆ ಕುಸಿತದ ಬಗ್ಗೆ ಸ್ಥಳೀಯ ನಾಗರಿಕರ ದೂರಿನ ಅನ್ವಯ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ,ಪಂಚಾಯತ್ ರಾಜ್ ಇಲಾಖೆಯ ಇಂಜಿನಿಯರ್, ಪಂಚಾಯತ್ ಅಧ್ಯಕ್ಷರು, ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯರು ಭೇಟಿ ನೀಡಿ ಪರಿಶೀಲಿಸಿದ್ದು ಸೇತುವೆ ದುರಸ್ತಿ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.
ಈ ನಡುವೆ ಅತಿಕಾರಿಬೆಟ್ಟು ಗ್ರಾಮ ಪಂಚಾಯತಿಯಲ್ಲಿ ಮತ್ತೆ ಮರಳುಗಾರಿಕೆ ಶುರುಮಾಡಿದರೆ ಉಗ್ರ ಪ್ರತಿಭಟನೆ ನಡೆಸುವುದಾಗಿ ಸ್ಥಳೀಯ ನಾಗರಿಕರು ಎಚ್ಚರಿಸಿದ್ದಾರೆ.
Kshetra Samachara
19/09/2021 08:27 pm