ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಂಟ್ವಾಳ: ಹದಗೆಟ್ಟ ರಸ್ತೆ: ಮಾಣಿ ಲಕ್ಕಪ್ಪಕೋಡಿ ಜನರಿಗೆ ಸಮಸ್ಯೆ

ಬಂಟ್ವಾಳ: ಬಂಟ್ವಾಳ ತಾಲೂಕಿನ ಮಾಣಿ ಗ್ರಾಮದ ಲಕ್ಕಪ್ಪಕೋಡಿ ಎಂಬಲ್ಲಿ ಪಂಚಾಯಿತಿ ರಸ್ತೆಯೊಂದು ತೀವ್ರ ಹದಗೆಟ್ಟ ಸ್ಥಿತಿಯಲ್ಲಿದ್ದು ದುರಸ್ತಿಯ ನಿರೀಕ್ಷೆಯಲ್ಲಿದೆ. ಮಾಣಿಯಿಂದ ಲಕ್ಕಪ್ಪಕೋಡಿಯಾಗಿ ಅರ್ಬಿ ಎಂಬಲ್ಲಿಗೆ ತೆರಳುವ ಈ ರಸ್ತೆಯ ಆರಂಭದಲ್ಲಿ ಡಾಂಬರು ಇದ್ದರೂ ಬಳಿಕ ಕೆಸರುಮಯವಾಗಿದ್ದು, ನಡೆದಾಡಲೂ ಆಗದ ಸ್ಥಿತಿ ನಿರ್ಮಾಣವಾಗಿದೆ.

ಕಳೆದ ಐದು ವರ್ಷಗಳಿಂದ ಈ ರಸ್ತೆ ಹೀಗೆಯೇ ಇದ್ದರೂ ಸ್ಥಳೀಯರು ಮನವಿ ನೀಡಿದರೂ ಇನ್ನೂ ರಿಪೇರಿ ಆಗಿಲ್ಲ. ಮಳೆಗಾಲ ಬಂದರೆ ರಸ್ತೆ ಸಂಪೂರ್ಣ ಕೆಸರುಮಯವಾಗುತ್ತಿದ್ದು, ಇತ್ತೀಚೆಗೆ ರೋಗಿಯೊಬ್ಬರನ್ನು ಕರೆದೊಯ್ಯಲು ಆಂಬುಲೆನ್ಸ್ ಕೂಡ ಸಾಗದ ಸ್ಥಿತಿ ನಿರ್ಮಾಣವಾದಾಗ ಅವರನ್ನು ಹೊತ್ತುಕೊಂಡೇ ಹೋಗಬೇಕಾಯಿತು.

Edited By : Manjunath H D
Kshetra Samachara

Kshetra Samachara

12/09/2021 11:40 am

Cinque Terre

21.71 K

Cinque Terre

0

ಸಂಬಂಧಿತ ಸುದ್ದಿ