ವರದಿ: ರಹೀಂ ಉಜಿರೆ
ಉಡುಪಿ: ಬಸ್ ಮಾಲಕರು ಶ್ರೀಮಂತರು ಎಂಬುದು ಎಲ್ಲರ ಭಾವನೆ.ಹಿಂದೆಲ್ಲ ಇದು ನಿಜ ಕೂಡ.ಉಡುಪಿಯಲ್ಲಂತೂ ಖಾಸಗಿ ಬಸ್ ಗಳದ್ದೇ ಕಾರುಬಾರು.ಆದರೆ ಕೊರೋನಾ ಇಂತಹ ಹಲವು ಬಸ್ ಮಾಲಕರನ್ನು ಬೀದಿಗೆ ತಂದಿದೆ!
ಕರಾವಳಿಯ ಹಲವೆಡಗಳಲ್ಲಿ ಈಗ ಇಂತಹದ್ದೇ ದೃಶ್ಯ ಕಣ್ಣಿಗೆ ಬೀಳುತ್ತವೆ.ಬೆಳೆದಿರುವ ಗಿಡಗಂಟಿಗಳ ನಡುವೆ ಮುಚ್ಚಿ ಹೋಗಿರುವ ಬಸ್ಸುಗಳು.ಹೌದು..ಮಹಾಮಾರಿ ಕೊರೋನಾದ ಎಫೆಕ್ಟ್ ಇದು.ಹೆಚ್ಚು ಕಡಿಮೆ ಒಂದೂವರೆ ವರ್ಷವಾಯ್ತು.ಹಲವು ಬಸ್ ಗಳು ಇಟ್ಟಲ್ಲೇ ಇಟ್ಟು ತುಕ್ಕು ಹಿಡಿಯುತ್ತಿವೆ. ಇದನ್ನು ಮೊದಲ ರೀತಿ ಸುಸ್ಥಿತಿಗೆ ತರಲು ಒಂದು ಲಕ್ಷಕ್ಕೂ ಹೆಚ್ಚು ಹಣ ಬೇಕು. ಇಂತಹ ನೂರಾರು ಬಸ್ಸುಗಳು ಉಡುಪಿಯಲ್ಲಿವೆ. ಸರ್ಕಾರಿ ವಲಯದ ಬಸ್ ಗಳನ್ನು ಸಂಕಷ್ಟದಿಂದ ಪಾರು ಮಾಡಲು 2,380 ಕೋಟಿ ರುಪಾಯಿ ಅನುದಾನ ನೀಡಿದ ಸರ್ಕಾರ ಖಾಸಗಿ ಬಸ್ ಗಳತ್ತ ಕಣ್ಣೆತ್ತಿಯೂ ನೋಡಲಿಲ್ಲ. ಕೊರೋನಾದಿಂದ ಚೇತರಿಸಿಕೊಳ್ಳಲು ಆರು ತಿಂಗಳ ತೆರಿಗೆ ವಿನಾಯಿತಿ ನೀಡಬೇಕು, ಅನಾರೋಗ್ಯಕರವಾಗಿ ನಡೆಸುವ ಪೈಪೋಟಿ ನಿಲ್ಲಿಸಬೇಕು ಹಾಗೂ ಹೊಸ ಸಾರಿಗೆ ನೀತಿ ಜಾರಿಗೆ ತರಬೇಕು ಎಂದು ಬಸ್ ಮಾಲಕರ ಸಂಘದ ಅಧ್ಯಕ್ಷರ ಒತ್ತಾಯ ಮಾಡಿದ್ದಾರೆ
ನೂರಾರು ಬಸ್ ಮಾಲಕರು ತೆರಿಗೆ ಕಟ್ಟಲು ಸಾಧ್ಯವಾಗದೆ, ಪರ್ಮೀಟ್ ಗಳನ್ನು ಸಾರಿಗೆ ಇಲಾಖೆಗೆ ಸರಂಡರ್ ಮಾಡಿದ್ದಾರೆ.ಅಳಿದುಳಿದ ಬಸ್ ಗಳಲ್ಲಿ ಟಿಕೆಟ್ ದರ ವಿಪರೀತ ಹೆಚ್ಚಿಸಿದ್ದಾರೆ.ದಿನೇದಿನೆ ಹೆಚ್ಚುತ್ತಿರುವ ಡೀಸೆಲ್ ಬೆಲೆ ಹೆಚ್ಚಳವನ್ನು ಬಸ್ ಮಾಲಕರು ಪ್ರಯಾಣಿಕರ ಮೇಲೆ ವರ್ಗಾಯಿಸಿದ್ದಾರೆ.ಇದರಿಂದಾಗಿ ಬಸ್ ಪ್ರಯಾಣಿಕರಿಗೂ ತೊಂದರೆಯಾಗುತ್ತಿದೆ.
ಒಟ್ಟಾರೆ ಮಹಾಮಾರಿ ಕೊರೋನಾ ಇಡೀ ಖಾಸಗಿ ಬಸ್ ಉದ್ಯಮದ ಮೇಲೆ ದೊಡ್ಡ ಹೊಡೆತವನ್ನೇ ನೀಡಿದೆ.ಇದರೊಂದಿಗೆ ಬಸ್ ಪ್ರಯಾಣಿಕರೂ ಕಷ್ಟ ಪಡುವಂತಾಗಿದೆ.
Kshetra Samachara
27/08/2021 03:56 pm