ಕಡಬ ತಾಲೂಕು ವ್ಯಾಪ್ತಿಯಲ್ಲಿ ಬರುವ ಉದನೆ-ಶಿಬಾಜೆ ರಸ್ತೆಯ ಅಭಿವೃದ್ಧಿ ಕಾಮಗಾರಿ ಅಂದರೆ ಉದನೆಯ ಕೊಂಬಾರು ಕಾಲನಿಯಿಂದ ಸೋಣಂದೂರು ಬಸ್ ನಿಲ್ದಾಣದ ವರೆಗಿನ ರಸ್ತೆ ಕಾಂಕ್ರೀಟಿಕರಣ ನಡೆಸುವ ಹಿನ್ನಲೆಯಲ್ಲಿ ಸದ್ರಿ ರಸ್ತೆಯಲ್ಲಿ ವಾಹನಗಳ ಓಡಾಟಕ್ಕೆ ಆಗಸ್ಟ್ 25ರಿಂದ ಅಕ್ಟೋಬರ್ 25ರ ವರೆಗೆ ನಿರ್ಬಂಧ ವಿಧಿಸಲಾಗಿದೆ ಎಂದು ಪುತ್ತೂರು ಲೋಕೋಪಯೋಗಿ ಇಲಾಖೆಯ ಪ್ರಕಟಣೆ ತಿಳಿಸಿದೆ.
ಸಾರ್ವಜನಿಕರು ಈ ಸಮಯದಲ್ಲಿ ಬದಲಿ ರಸ್ತೆಯಲ್ಲಿ ಚಲಿಸಿ ಸಹಕರಿಸುವಂತೆ ಲೋಕೋಪಯೋಗಿ ಇಲಾಖೆ ತಿಳಿಸಿದೆ. ಸಾರ್ವಜನಿಕರು ಬದಲಿ ರಸ್ತೆಯಾಗಿ ಶಿಬಾಜೆ-ಅರಸಿನಮಕ್ಕಿ, ಎಂಜಿರ-ಉದನೆ ರಸ್ತೆಯ ಮೂಲಕ ಚಲಿಸುವಂತೆ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಲೋಕೋಪಯೋಗಿ ಇಲಾಖೆ ಪುತ್ತೂರು ಉಪವಿಭಾಗ ಇವರು ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ.
Kshetra Samachara
25/08/2021 01:08 pm