ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ತ್ಯಾಜ್ಯವನ್ನೇ ಸಂಸ್ಕರಿಸಿ ಗೊಬ್ಬರ ಮಾಡಿ ರಾಜ್ಯಕ್ಕೆ ಮಾದರಿಯಾದ ಉಳ್ಳಾಲ ನಗರಸಭೆ

ಮಂಗಳೂರು: ನಗರದ ಉಳ್ಳಾಲ ನಗರ ಸಭೆ ವ್ಯಾಪ್ತಿಯಲ್ಲಿ ಸಂಗ್ರಹವಾದ ತ್ಯಾಜ್ಯವನ್ನು ಗೊಬ್ಬರವನ್ನಾಗಿ ಪರಿವರ್ತಿಸಿ ಮಾರುಕಟ್ಟೆಗೆ ಮಾರಾಟ ಮಾಡುವ ವಿನೂತನ ಕಾರ್ಯಕ್ರಮಕ್ಕೆ ಶಾಸಕ ಖಾದರ್ ಚಾಲನೆ ನೀಡಿದರು. ಈ ಮೂಲಕ ಮುಂದಿನ ದಿನಗಳಲ್ಲಿ 'ಉಳ್ಳಾಲ ಬ್ರ್ಯಾಂಡ್' ಗೊಬ್ಬರ ಮಾರುಕಟ್ಟೆಯಲ್ಲಿ ದೊರೆಯಲಿದೆ. ರಾಜ್ಯದಲ್ಲಿಯೇ ಇದು ಪ್ರಪ್ರಥಮ ಪ್ರಯೋಗವಾಗಿದೆ.

ಈ ಬಗ್ಗೆ ಶಾಸಕ ಯು.ಟಿ.ಖಾದರ್ ಮಾತನಾಡಿ, ಈ ವಿನೂತನ ಪ್ರಯೋಗ ದ.ಕ.ದ‌ಕ ಜಿಲ್ಲೆಗೆ ಮಾದರಿಯಾಗಿದೆ. ಘನತ್ಯಾಜ್ಯ ವಿಲೇವಾರಿ ಈಗಿನ ಬಹುದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ಘನತ್ಯಾಜ್ಯವನ್ನು ಸಮರ್ಪಕವಾಗಿ ಸದ್ಬಳಕೆ ಮಾಡಬಹುದು ಎಂಬ ಆಲೋಚನೆ ಇದ್ದರೂ, ಅನುಷ್ಠಾನ ಆಗಿರೋದು ಬಹಳ ಕಡಿಮೆ. ಇಂತಹ ಅಸಾಧ್ಯ ಕಾರ್ಯವನ್ನು ಉಳ್ಳಾಲ ನಗರ ಸಭೆಯ ಅಧ್ಯಕ್ಷರು, ಸದಸ್ಯರು, ಸಮಿತಿಯ ಅಧಿಕಾರಿಗಳು ಸಾಧ್ಯ ಮಾಡಿ ತೋರಿಸಿದ್ದಾರೆ.

ತಿಂಗಳಿಗೆ ನಾಲ್ಕು ಟನ್ ಗೊಬ್ಬರವನ್ನು ಉಳ್ಳಾಲ ನಗರಸಭೆಯ ಮುಖಾಂತರ ನಾವು ತಯಾರು ಮಾಡಲಿದ್ದೇವೆ. ಕೆಜಿಗೆ 10 ರೂ.ನಂತೆ ರೈತರಿಗೆ ವಿತರಣೆ ಮಾಡಲಿದ್ದೇವೆ. ಈ ಮೂಲಕ ಉಳ್ಳಾಲ ಬ್ರ್ಯಾಂಡ್ ಗೊಬ್ಬರ ಮಾರುಕಟ್ಟೆಯಲ್ಲಿ ದೊರೆಯಲಿದೆ ಎಂದು‌ಶಾಸಕ ಖಾದರ್ ಹೇಳಿದರು.

Edited By : Nagesh Gaonkar
Kshetra Samachara

Kshetra Samachara

16/08/2021 10:45 pm

Cinque Terre

25.82 K

Cinque Terre

2

ಸಂಬಂಧಿತ ಸುದ್ದಿ