ಚಾಂತಾರು: ಚಾಂತಾರು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಇಂದು ಬ್ರಹ್ಮಾವರ ತಾಲೂಕು ಪಂಚಾಯತ್ ವ್ಯಾಪ್ತಿಯ ಪರಿಶಿಷ್ಟ ಪಂಗಡದ ಕೊರಗ ಜನಾಂಗದವರ ಕುಂದುಕೊರತೆ ಸಭೆ ನಡೆಯಿತು.ಸಭೆಯ ಅಧ್ಯಕ್ಷತೆಯನ್ನು ಶಾಸಕ ಕೆ. ರಘುಪತಿ ಭಟ್ ವಹಿಸಿದರು.
ಸಭೆಯಲ್ಲಿ ಹಲವಾರು ವರ್ಷಗಳಿಂದ ಕಂದಾಯ ಭೂಮಿಯಲ್ಲಿ ವಾಸ್ತವ್ಯವಿದ್ದು ಅನುಭವಿಸಿಕೊಂಡು ಬಂದ ನೈಜ ಅನುಭೋಗದಾರ ಹೆಸರಿನಲ್ಲಿ ಆಸ್ತಿ ದಾಖಲೆಗಳು ಇಲ್ಲದೇ ಇದ್ದು ಬಗ್ಗೆ ಚರ್ಚೆ ನಡೆಯಿತು. ಈ ಬಗ್ಗೆ ಶಾಸಕರು ತಹಸಿಲ್ದಾರರಲ್ಲಿ ಸಂಬಂಧಪಟ್ಟ ಸ್ಥಳಕ್ಕೆ ಭೇಟಿ ನೀಡಿ ಅವರಿಂದ ಜಾಗದ ಬಗ್ಗೆ ಇರುವ ಅರ್ಹ ದಾಖಲೆಗಳನ್ನು ಅಥವಾ ಮಹಾಜರು ಪಂಚನಾಮೆ ನಡೆಸುವ ಮೂಲಕ ನೈಜ ಅನುಭೋಗದಾರರಿಗೆ ಆಸ್ತಿಯನ್ನು ವಿತರಿಸುವ ಬಗ್ಗೆ 3 ತಿಂಗಳ ಒಳಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ಬ್ರಹ್ಮಾವರ ತಹಶೀಲ್ದಾರರಾದ ರಾಜಶೇಖರ್, ಐ.ಟಿ.ಡಿ.ಪಿ ಉಡುಪಿ ಯೋಜನಾ ಸಮನ್ವಯಾಧಿಕಾರಿಗಳಾದ ದೂದ್ ಪೀರ್ ಹಾಗೂ ಕೊರಗ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.
Kshetra Samachara
10/08/2021 05:25 pm