ವರದಿ :ದಾಮೋದರ ಮೊಗವೀರ ನಾಯಕವಾಡಿ .
ಬೈಂದೂರು: ಸಮುದ್ರ ಕಡಲ ಕಿನಾರೆ ಎಂಬುವುದು ಎಲ್ಲರ ಆಕರ್ಷಣೆ ಕೇಂದ್ರ ಕರಾವಳಿ ಜನರಿಗೆ ಬಿಡಿ .ಬೆಂಗಳೂರು ಬಯಲುಸೀಮೆ ಜನ ಮೈಸೂರಿನಂತಹ ಊರಿನ ಜನರಿಗೆ ಮರವಂತೆ ಬೀಚ್ ನ ಆಕರ್ಷಣೆ ಇನ್ನೂ ಜಾಸ್ತಿ ಇದೇ ಆಕರ್ಷಣೆ ಜೀವಕ್ಕೆ ಮುಳುವಾಗುತ್ತಿರುವ ಘಟನೆಗಳು ಇಲ್ಲಿ ನಡೆಯುತ್ತಲೇ ಇರುತ್ತದೆ .
ದೂರದೂರುಗಳಿಂದ ಸಾವಿರಾರು ಸಂಖ್ಯೆಗಳಲ್ಲಿ ಪ್ರವಾಸಿಗರು ಸಮುದ್ರದ ಕಡಲ ಅಲೆಗೆ ಮಾರು ಹೋಗಿ ನೀರಿಗಿಳಿಯುತ್ತಾರೆ .ನೀರಿಗಿಳಿದ ಮೇಲೆ ಕೈಯಲ್ಲಿರುವ ಮಕ್ಕಳನ್ನು ಲೆಕ್ಕಿಸದೆ ಮೈಮರೆತು ಮೋಜು ಮಸ್ತಿ ಮಾಡುತ್ತಾರೆ
ಇಂತಹ ಸಂದರ್ಭಗಳಲ್ಲಿ ಅಪಾಯಗಳದಾಗ ಏನು ಮಾಡುವುದು ? ನಿಜ ಹೇಳಬೇಕೆಂದರೆ ಮರವಂತೆ ಬೀಚ್ ನಲ್ಲಿ ಅಗತ್ಯ ಸೌಲಭ್ಯ ಇಲ್ಲ .
ಬೀಚ್ ನಲ್ಲಿ ಅಪಾಯದ ಬಗ್ಗೆ ಫಲಕದ ಬೋರ್ಡುಗಳು ಇಲ್ಲ ಹಾಗೂ ಹೋಮ್ ಗಾರ್ಡ್ ಗಳು ಆಗಲೋ ಈಗಲೋ ಒಂದು ಸಲ ಬಂದು ಹೋಗುತ್ತಾರೆ ಇನ್ನು ಮುಂದೆಯಾದರೂ ಪ್ರವಾಸೋದ್ಯಮ ಇಲಾಖೆ ಪ್ರವಾಸಿಗರ ರಕ್ಷಣೆ ಮತ್ತು ಭದ್ರತೆಗೆ ಒತ್ತು ನೀಡದೇ ಹೋದರೆ ಮರವಂತೆ ಬೀಚ್ ನಲ್ಲಿ ಇನ್ನಷ್ಟು ಅನಾಹುತಗಳು ಆಗುವುದರಲ್ಲಿ ಸಂಶಯವಿಲ್ಲ ಎಂದು ಸ್ಥಳೀಯ ಮಹಿಳೆಯೊಬ್ಬರು ಪ್ರವಾಸೋದ್ಯಮ ಇಲಾಖೆಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು .
Kshetra Samachara
08/08/2021 10:28 pm