ಮಂಗಳೂರು: ಕರ್ನಾಟಕ ಕರಾವಳಿಯಾದ್ಯಂತ ಎರಡು ತಿಂಗಳ ಯಾಂತ್ರೀಕೃತ ಕಡಲ ಮೀನುಗಾರಿಕೆ ನಿಷೇಧ ಅವಧಿ ಜುಲೈ 31ರ ಬಳಿಕ ಕೊನೆಗೊಳ್ಳಲಿದ್ದು, ಆಗಸ್ಟ್ 1ರಿಂದ ಮೀನುಗಾರಿಕೆ ಬೋಟ್ ಗಳು ಪ್ರಾಕೃತಿಕ ಪರಿಸ್ಥಿತಿ ಅವಲಂಬಿಸಿ ಕಡಲಿಗೆ ಲಗ್ಗೆ ಹಾಕಲಿವೆ.
ಮೊದಲಿಗೆ ಆಳಕಡಲ ಬೋಟ್ ಗಳು ಮೀನು ಶಿಕಾರಿಗೆ ಸಮುದ್ರಕ್ಕೆ ಧಾವಿಸುತ್ತವೆ. ಇದೀಗ ಕರಾವಳಿಯಾದ್ಯಂತ ಮಳೆ ಅಬ್ಬರ ಕಡಿಮೆಯಾಗಿದ್ದರೂ ಗಾಳಿಯ ಪ್ರತಾಪ ಜೋರಾಗಿಯೇ ಇದ್ದು, ಕಡಲಲೆಗಳು ಆಳೆತ್ತರ ಎದ್ದೇಳುತ್ತಿದೆ.
ಆಗಸ್ಟ್ 1ರಿಂದಲೇ ಬೋಟ್ ಗಳು ಕಡಲಿಗಿಳಿಯುವುದು ಅನುಮಾನವಾದರೂ ಆಗಸ್ಟ್ ಮೊದಲ ವಾರದ ನಂತರ ಹಂತ ಹಂತವಾಗಿ ಬೋಟ್ ಗಳು ಮಳೆ- ಗಾಳಿ ಹಾಗೂ ಸಮುದ್ರರಾಜನ ಮೂಡ್ ನೋಡಿಕೊಂಡು ಮೀನು ಬೇಟೆಗೆ ತೆರಳಲಿವೆ.
ನದಿ ದಡದ ಮೇಲಿರುವ ಬೋಟ್ ಗಳನ್ನು ಈಗ ನೀರಿಗಿಳಿಸುವ ಭರದ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ಅಂತಿಮ ಸಿದ್ಧತಾ ಕಾರ್ಯ ನಡೆಯುತ್ತಿದೆ.
Kshetra Samachara
31/07/2021 04:06 pm