ಮುಲ್ಕಿ: ಮುಲ್ಕಿ ಸಮೀಪದ ಕಿಲ್ಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಿಲ್ಪಾಡಿ ಸ್ವಸಹಾಯ ಗುಂಪು, ನವೋದಯ ಮತ್ತು ಸ್ರೀ ಶಕ್ತಿ ಗುಂಪಿನ ಸದಸ್ಯರು ಒಟ್ಟು ಸೇರಿ ನರೇಗ ಯೋಜನೆಯ ಅಡಿಯಲ್ಲಿ ಕಲ್ಯಾಣಿ ಶೆಡ್ತಿ ಮನೆ ಬಳಿಯಿಂದ ದಾಸ ಪೂಜಾರಿ ಮನೆವರೆಗಿನ ಪರಂಬೋಕು ತೋಡಿನ ಹೂಳೆತ್ತುವ ಕಾಮಗಾರಿ ನಡೆಸುತ್ತಿದ್ದಾರೆ.
ಈ ಸಂದರ್ಭ ಯೋಜನೆಯ ಸದಸ್ಯರೊಬ್ಬರು ಮಾತನಾಡಿ ಈ ಬಾರಿ ಕೊರೊನಾದಿಂದ ಆರ್ಥಿಕ ಸಂಕಷ್ಟ ಎದುರಾಗಿದ್ದು ಪಂಚಾಯಿತಿ ಮೂಲಕ ನರೇಗಾ ಯೋಜನೆಯಡಿ ವಿವಿಧ ಸಂಘಟನೆಗಳ ಮೂಲಕ ತೋಡಿನ ಹೂಳೆತ್ತುವ ಕಾಮಗಾರಿ ನಡೆಸುತ್ತಿದ್ದೇವೆ ಎಂದರು. ತಾಲೂಕು ಪಂಚಾಯತ್ ನಿಂದ ಮಾಹಿತಿ ಶಿಕ್ಷಣ ಸಂವಹನ ಕುಮಾರಿ ಶ್ವೇತ ರವರು ಕಾಮಗಾರಿಯನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಂತಹ ಸರಕಾರದ ಯೋಜನೆಗಳು ತುಂಬ ಉಪಯುಕ್ತವಾಗಿದ್ದು ಗ್ರಾಮಸ್ಥರು ಸದುಪಯೋಗ ಪಡಿಸಿಕೊಳ್ಳುವ ಮೂಲಕ ಮಾದರಿ ಗ್ರಾಮ ಪಂಚಾಯಿತಿ ಮಾಡುವಲ್ಲಿ ಶ್ರಮಿಸಬೇಕು ಎಂದರು. ಕಿಲ್ಪಾಡಿ ಪಂಚಾಯತ್ ಸಿಬ್ಬಂದಿಗಳಾದ ಸುರೇಶ್ ಮತ್ತು ತಾರನಾಥ್ ಶೆಟ್ಟಿಗಾರ್ ಉಪಸ್ಥಿತರಿದ್ದರು.
Kshetra Samachara
24/02/2021 10:56 pm