ಮಂಗಳೂರು: ಹರೇಕಳ- ಅಡ್ಯಾರ್ ಡ್ಯಾಂ ಮತ್ತು ಸೇತುವೆ ಕಾಮಗಾರಿ ಶರವೇಗದಲ್ಲಿ ನಡೆಯುತ್ತಿದ್ದು, ನಾಲ್ಕು ತಿಂಗಳಲ್ಲಿ ಪೂರ್ಣಗೊಳ್ಳಲಿದೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರವು 200 ಕೋಟಿ ರೂ. ವೆಚ್ಚದಲ್ಲಿ ಈ ಯೋಜನೆಯನ್ನು ರೂಪಿಸಿತ್ತು. ಈ ಮೂಲಕ ಹರೇಕಳದಲ್ಲಿ ಸಿಹಿನೀರು ನಿಲ್ಲಿಸಿ ಉಳ್ಳಾಲ ಭಾಗಕ್ಕೆ ಸರಬರಾಜು ಮಾಡುವ ಡ್ಯಾಂ ಜತೆಗೆ ಹರೇಕಳ-ಅಡ್ಯಾರ್ ಸೇತುವೆ ನಿರ್ಮಾಣ ಕಾಮಗಾರಿ ಶರವೇಗದಲ್ಲಿ ನಡೆಯುತ್ತಿದ್ದು ಮೇ ಮಾಸಾಂತ್ಯ ಪೂರ್ಣಗೊಳ್ಳಲಿದೆ.
‘ಟರ್ನ್ ಕೀ ಬೇಸಿಸ್’ ಮೈನರ್ ಇರಿಗೇಶನ್ ಸಂಸ್ಥೆ ಖರ್ಚು ವೆಚ್ಚದ ಯೋಜನೆ ರೂಪಿಸಿದ್ದು, ಜಿ.ಶಂಕರ್ ಸಂಸ್ಥೆ 192.5 ಕೋಟಿಗೆ ಸಂಪೂರ್ಣ ಕಾಮಗಾರಿಯ ಗುತ್ತಿಗೆ ವಹಿಸಿಕೊಂಡಿದೆ. ಕಳೆದ ಮಾರ್ಚ್‌ನಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗಿತ್ತು, ಅದೇ ಸಂದರ್ಭ ಲಾಕ್‌ಡೌನಿಂದಾಗಿ ಅಡ್ಡಿಯಾಗಿತ್ತು. ಸದ್ಯ ಕಾಮಗಾರಿ ಚುರುಕುಗೊಂಡಿದ್ದು, ಸೇತುವೆ ಪೂರ್ಣಗೊಂಡು ಜನರು ಹರೇಕಳದಿಂದ ಅಡ್ಯಾರ್‌ಗೆ ನಡೆದಾಡಿಕೊಂಡು ಹೋಗಲು ಅವಕಾಶ ಸಿಗಲಿದೆ. ಮುಂದಿನ ವರ್ಷಾಂತ್ಯದಲ್ಲಿ ಏಳು ಮೀಟರ್ ಅಗಲದ ರಸ್ತೆಯೊಂದಿಗೆ ಸೇತುವೆ ಲಘುವಾಹನ ಸಂಚಾರ ಮುಕ್ತವಾಗಲಿದೆ.
Kshetra Samachara
20/02/2021 08:27 pm